ಪ. ಶಿ. ದೊಡ್ಡಮನಿಯವರ "ದಲಿತ ಕ್ರಾಂತಿ"

ಕವಿ, ಲೇಖಕ, ಹಿರಿಯ ಪತ್ರಕರ್ತರಾದ ಹುಬ್ಬಳ್ಳಿಯ ಪ. ಶಿ. ದೊಡ್ಡಮನಿ (ಪಿ. ಎಸ್. ದೊಡ್ಡಮನಿ) ಅವರು ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿ ಕಳೆದ ೩೨ ವರ್ಷಗಳಿಂದ ಪ್ರಕಟಿಸಿಕೊಂಡುಬರುತ್ತಿರುವ ಪಾಕ್ಷಿಕ ಪತ್ರಿಕೆಯಾಗಿದೆ "ದಲಿತ ಕ್ರಾಂತಿ".

ಟ್ಯಾಬ್ಲಾಯ್ಡ್ ಮಾದರಿಯಲ್ಲಿ ಎಂಟು ಪುಟಗಳೊಂದಿಗೆ ಆರಂಭವಾದ "ದಲಿತ ಕ್ರಾಂತಿ", ಎರಡು ವರ್ಷಗಳ ನಂತರ ೧೬ ಪುಟಗಳ ಪತ್ರಿಕೆಯಾಯಿತು. ಪ್ರಸ್ತುತ ೨೦ ಪುಟಗಳ ಪತ್ರಿಕೆಯಾಗಿ ಬೆಳೆದು ಮುನ್ನಡೆಯುತ್ತಿದೆ. ೨೦೧೪ರಲ್ಲಿ ಕರ್ನಾಟಕ ಸರಕಾರದ ಮಾಧ್ಯಮಗಳ ಪಟ್ಟಿಗೆ ಸೇರ್ಪಡೆಗೊಂಡಿರುವ ದಲಿತ ಕ್ರಾಂತಿಯ ಕಾರ್ಯಾಲಯವು ಹಳೇ ಹುಬ್ಬಳ್ಳಿ ಹುಲಿಗೆಮ್ಮ ದೇವಿ ಗುಡಿ ಹತ್ತಿರದ ಎಸ್. ಎಮ್. ಕೃಷ್ಣಾ ನಗರದಲ್ಲಿದೆ.

ನಾಗರಾಜ ಪಿ‌. ದೊಡ್ಡಮನಿ ಉಪಸಂಪಾದಕರು. ಎ. ಎಚ್. ಆನಂದ, ಮಾರುತಿ ಟಿ., ಎಚ್. ಆರ್. ಹರಿಜನ ಹಾಗೂ ರವೀಂದ್ರನಾಥ ಪಿ. ದೊಡ್ಡಮನಿ ಮುಖ್ಯ ವರದಿಗಾರರು. ರಾಮಚಂದ್ರ ಹೊಸಮನಿ, ಶ್ರೀರಾಮಯ್ಯ ಸಿ. ವಿ., ನಾಗರಾಜ ಕೆ., ರಮೇಶ ಡಿ. ವರದಿಗಾರರು. ಎಚ್. ವಿ. ಕೆ. ಮೂರ್ತಿ ಕಾನೂನು ಸಲಹೆಗಾರರು.

ವಿರುಪಾಕ್ಷ ಗೌಡ ಶಿ ಕುಲಕರ್ಣಿ, ಸಿದ್ಧಾರ್ಥ ಕಾಂಬಳೆ, ಮಾದೇವ ಚ. ಜಂಬಗಿ, ಪ್ರಶಾಂತ ಜಿ. ರಾಮನೂರ, ಬಿ. ಸಿ. ಮಾರುತಿ, ರಾಜಶೇಖರ ಬಳ್ಳಾರಿ, ಮಹಂತೇಶ ಪಿ., ರಮೇಶ ಎನ್. ಮಸ್ಕಲ್ ಮಟ್ಟಿ, ತಿಪ್ಪೇಸ್ವಾಮಿ ಹೆಚ್, ರಘುಸ್ವಾಮಿ ಬಿ. ವಿ., ಆನಂದ ಎಚ್. ಚಲವಾದಿ, ಪ್ರವೀಣ ದಿ. ಡಿಗ್ಗೆ, ವೆಂಕಟೇಶ್ ಎನ್, ರಂಗಸ್ವಾಮಿ ಸಿ, ಹನುಮಂತ ಹೊಸಮನಿ, ರಮೇಶ ಮಾಯಾಮುಡಿ, ಕಲ್ಲೇಶ ಜಿ. ಎಲ್, ಹೊನ್ನುರಸ್ವಾಮಿ ಎನ್. ಹಾಗೂ ಜುಮ್ಮಣ್ಣ ಎಸ್. ಚಲವಾದಿ ಜಾಹೀರಾತುದಾರರು. ಪತ್ರಿಕೆ ರಾಜ್ಯಾದ್ಯಾಂತ ಚಂದಾದಾರರಿಗೆ ಅಂಚೆ ಮೂಲಕ ವಿತರಣೆಯಾಗುತ್ತದೆ. ದಲಿತ ಪರ ಪ್ರತಿಭಟನೆ, ಧರಣಿ ಹೋರಾಟಗಳ ವರದಿಗಳು, ಲೇಖನಗಳು, ವಿಮರ್ಶೆ - ವಿಶ್ಲೇಷಣೆಗಳು "ದಲಿತ ಕ್ರಾಂತಿ"ಯಲ್ಲಿ ಆದ್ಯತೆಯಲ್ಲಿ ಪ್ರಕಟಗೊಳ್ಳುತ್ತವೆ.

ಪತ್ರಿಕೆಯ ವಾರ್ಷಿಕ ಚಂದಾ ಮೊತ್ತ ೫೦೦/- ರೂಪಾಯಿ. ಸದಸ್ಯತ್ವ ಮೊತ್ತ ೫೦೦೦/-, ಅಜೀವ ಸದಸ್ಯತ್ವ ಮೊತ್ತ ೧೦,೦೦೦/-, ಮಹಾಪೋಷಕತ್ವ ೨೫,೦೦೦/- ರೂಪಾಯಿಗಳಾಗಿವೆ.

~ ಶ್ರೀರಾಮ ದಿವಾಣ