ರೇಷ್ಮಾ ಜಿ. ಭಟ್ ಅವರ "ಚಿಂತನ ಬಯಲು"

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕು ಮೊಡಂಕಾಪುವಿನವರಾದ ರೇಷ್ಮಾ ಜಿ. ಭಟ್ ಅವರು ಕಳೆದ ಹದಿನಾಲ್ಕು ವರ್ಷಗಳಿಂದ ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲಕರಾಗಿ ಮುನ್ನಡೆಸಿಕೊಂಡು ಬರುತ್ತಿರುವ ತ್ರೈಮಾಸಿಕ ಪತ್ರಿಕೆಯಾಗಿದೆ "ಚಿಂತನ ಬಯಲು".

೨೦೧೨ರಲ್ಲಿ ಆರಂಭವಾದ " ಚಿಂತನ ಬಯಲು", ೮೦ + ೪ ಪುಟಗಳ ಪುಸ್ತಕ ರೂಪದ ತ್ರೈಮಾಸಿಕ. ಮಂಗಳೂರಿನ ಆಕೃತಿ ಪ್ರಿಂಟ್ಸ್ ನಲ್ಲಿ ಮುದ್ರಣವಾಗುತ್ತಿದೆ. ವಾರ್ಷಿಕ ಚಂದಾ ಮೊತ್ತ ೨೦೦/- ರೂಪಾಯಿ. ಮೂರು ವರ್ಷಗಳಿಗೆ ೬೦೦/-, ಐದು ವರ್ಷಗಳಿಗೆ ೧೦೦೦/-, ಆಜೀವ (ಪೋಷಕ) ಚಂದಾ ೫೦೦೦/-, ಮಹಾಪೋಷಕರಾಗಲು ೧೦,೦೦೦/- ರೂಪಾಯಿ. ಬಿಡಿ ಸಂಚಿಕೆಯ ಬೆಲೆ ೫೦/- ರೂಪಾಯಿ.

ಡಾ. ಅಜಕ್ಕಳ ಗಿರೀಶ್ ಭಟ್, ಡಾ. ಶ್ರೀಧರ್ ಎಚ್. ಜಿ., ಡಾ. ವರದರಾಜ ಚಂದ್ರಗಿರಿ, ಡಾ. ಜಿ. ಬಿ. ಹರೀಶ್ ಹಾಗೂ ಎಂ. ಎ. ಸುಬ್ರಹ್ಮಣ್ಯ ಸಂಪಾದಕೀಯ ಸಲಹೆಗಾರರಾಗಿದ್ದಾರೆ (೨೦೧೩ರ ಸಂಚಿಕೆಯಂತೆ). ಸಾಹಿತ್ಯ, ಸಂಸ್ಕೃತಿ, ಜಾನಪದ, ಕಲೆ, ಸಮಾಜ, ಭಾಷೆ ಇತ್ಯಾದಿ ವಿಷಯಗಳ ಸಂಶೋಧನಾ ಪ್ರಬಂಧಗಳು, ಅಧ್ಯಯನಾತ್ಮಕ ಲೇಖನಗಳು, ವಿಮರ್ಶೆಗಳು, ಪುಸ್ತಕ ಪರಿಚಯ ಹೀಗೆ ವೈವಿಧ್ಯಮಯ ವಿಚಾರಗಳಿಗೆ  ಸಂಬಂಧಿಸಿದ ಬರೆಹಗಳು "ಚಿಂತನ ಬಯಲು" ನಲ್ಲಿ ಆದ್ಯತೆಯಲ್ಲಿ ಪ್ರಕಟವಾಗುತ್ತವೆ.

~ ಶ್ರೀರಾಮ ದಿವಾಣ