ಕುಂಟಾಡಿ ದಯಾನಂದ ಪೈಗಳ "ವಾರದ ಡಂಗುರ"

ಹಿರಿಯ ಪತ್ರಕರ್ತರಾದ ಕಾರ್ಕಳದ ಕುಂಟಾಡಿ ದಯಾನಂದ ಪೈಗಳು ಸಂಪಾದಕ, ಪ್ರಕಾಶಕ, ಮುದ್ರಕ ಮತ್ತು ಮಾಲಕರಾಗಿ ಹೊರತರುತ್ತಿರುವ ವಾರಪತ್ರಿಕೆಯಾಗಿದೆ "ವಾರದ ಡಂಗುರ".

ಕಳೆದ ೨೭ ವರ್ಷಗಳಿಂದ ಪ್ರಕಟವಾಗುತ್ತಿರುವ " ವಾರದ ಡಂಗುರ" ಆರಂಭದಲ್ಲಿ ಚಿಕ್ಕ ಆಕಾರದಲ್ಲಿ ನಾಲ್ಕು ಪುಟಗಳೊಂದಿಗೆ ಬರುತ್ತಿದ್ದರೆ, ನಂತರ ದಿನಪತ್ರಿಕೆ ಆಕಾರದಲ್ಲಿ ನಾಲ್ಕು ಪುಟಗಳಲ್ಲಿ ಬರಲಾರಂಭಿಸಿತು. ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಐದು ರೂಪಾಯಿಗಳು.

ಮೂಡುಬಿದಿರೆಯಿಂದ ಪ್ರಕಾಶನಗೊಳ್ಳುತ್ತಿರುವ "ವಾರದ ಡಂಗುರ"ದಲ್ಲಿ ಸುದ್ಧಿಗಳು ಮತ್ತು ಲೇಖನಗಳಿಗೆ ಮೊದಲ ಆದ್ಯತೆ.

~ ಶ್ರೀರಾಮ ದಿವಾಣ