ಎಂ. ನಿತ್ಯಾನಂದ ಅವರ " ಜನ ಸಂಪರ್ಕ"

ಕುಂದಾಪುರ ತಾಲೂಕು ತೆಕ್ಕಟ್ಟೆಯ ಎಂ. ನಿತ್ಯಾನಂದ ಅವರು ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲೀಕರಾಗಿ ಕಳೆದ ೯ ವರ್ಷಗಳಿಂದ ಹೊರತರುತ್ತಿರುವ ಮಾಸಪತ್ರಿಕೆಯಾಗಿದೆ "ಜನ ಸಂಪರ್ಕ". ಟ್ಯಾಬ್ಲೋಯ್ಡ್ ಮಾದರಿಯಲ್ಲಿ ಎಂಟು ಪುಟಗಳೊಂದಿಗೆ ಪ್ರಕಟವಾಗುವ "ಜನ ಸಂಪರ್ಕ"ದ ಬಿಡಿ ಸಂಚಿಕೆಯ ಬೆಲೆ ಹತ್ತು ರೂಪಾಯಿ.

ಮಂಗಳೂರು ಯೆಯ್ಯಾಡಿಯ ದಿಗಂತ ಮುದ್ರಣದಲ್ಲಿ ಪತ್ರಿಕೆ ಮುದ್ರಣವಾಗುತ್ತಿದೆ. ಸದಭಿರುಚಿಯ ವೈವಿಧ್ಯಮಯ ಲೇಖನಗಳು ಮತ್ತು ಆಯ್ದ ಸುದ್ಧಿಗಳೊಂದಿಗೆ ಜನ ಸಂಪರ್ಕ ಪ್ರಕಟವಾಗುತ್ತಿದೆ.

~ ಶ್ರೀರಾಮ ದಿವಾಣ