ಬಿ.ಎಸ್.ಅಲಗು ಅವರ "ಬೃಹತ್ ನಾಡು" ಬೆಂಗಳೂರು ಜೆ.ಪಿ. ನಗರದಿಂದ ಕಳೆದ ಹದಿನೆಂಟು ವರ್ಷಗಳಿಂದ ಬಿ. ಎಸ್. ಅಲಗು ಸುಂದರಂ ಅವರು ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲಕರಾಗಿ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ "ಬೃಹತ್ ನಾಡು".
ಟ್ಯಾಬ್ಲಾಯ್ಡ್ ರೂಪದಲ್ಲಿ ೨೪ ಪುಟಗಳೊಂದಿಗೆ ಹೊರಬರುತ್ತಿರುವ ಬೃಹತ್ ನಾಡು ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ೧೯ ರೂಪಾಯಿಗಳು. ಬೃಹತ್ ಪ್ರೆಸ್ ನಲ್ಲಿ ಮುದ್ರಣವಾಗುವ "ಬೃಹತ್ ನಾಡು" ಪತ್ರಿಕೆಯಲ್ಲಿ ಕನ್ನಡ ಮತ್ತು ಇಂಗ್ಲೀಷ್ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ.
ಮುಜುರಾಯಿ, ನೋಂದಣಿಯೇ ಮೊದಲಾದ ಇಲಾಖೆಗಳಲ್ಲಿನ ಅಕ್ರಮಗಳು, ಧಾರ್ಮಿಕ ಲೇಖನಗಳು, ಮಾಹಿತಿ ಹಕ್ಕು ಕಾಯ್ದೆ ಕುರಿತಾದ ವಿಶ್ಲೇಷಣೆ, ಆಯೋಗದ ಸುದ್ಧಿಗಳು ಹೀಗೆ ಭ್ರಷ್ಟಾಚಾರ ವಿರೋಧಿ ಬರೆಹಗಳನ್ನು ಪತ್ರಿಕೆಯಲ್ಲಿ ಆದ್ಯತೆಯಿಂದ ಪ್ರಕಟಿಸಲಾಗುತ್ತಿದೆ.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!