ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ "ದತ್ತಪ್ರಕಾಶ"
ಒಡಿಯೂರು ಮಠವೆಂದೇ ಪ್ರಸಿದ್ಧವಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದಲ್ಲಿರುವ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ದತ್ತ ತತ್ತ್ವಜ್ಞಾನ ಪ್ರಚಾರ ಸಮಿತಿಯ ಶ್ರೀ ಗುರುದೇವ ಪ್ರಕಾಶನವು ಪ್ರಕಟಿಸುತ್ತಿರುವ ಆಧ್ಯಾತ್ಮಿಕ ದ್ವೈಮಾಸಿಕವಾಗಿದೆ "ದತ್ತಪ್ರಕಾಶ".
ಒಡಿಯೂರು ಮಠದ ಸಂಸ್ಥಾಪಕರಾದ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ದತ್ತಪ್ರಕಾಶದ ಸಂಸ್ಥಾಪಕರು. ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಗೌರವ ಸಂಪಾದಕರು. ಮುಳಿಯ ಶಂಕರ ಭಟ್ಟರು (ಎಂ. ಎಸ್. ಭಟ್) ಪ್ರಧಾನ ಸಂಪಾದಕರು. ಹಿರಣ್ಯ ವೆಂಕಟೇಶ್ವರ ಭಟ್ ಅವರು ಸಂಪಾದಕರು.
ಪ್ರೊ. ವಿ. ಬಿ. ಅರ್ತಿಕಜೆ (ಹಿರಿಯ ಸಾಹಿತಿಗಳು, ಪುತ್ತೂರು), ಯಶವಂತ ವಿಟ್ಲ (ಹಿರಿ ಪತ್ರಕರ್ತರು), ಒ. ಶ್ಯಾಮ ಭಟ್ (ವಕೀಲರು, ಮೈಸೂರು), ಪ್ರಕಾಶ್ ಕೆ. ಶೆಟ್ಟಿ ಪೇಟೆಮನೆ ಮುಂಬೈ ಹಾಗೂ ಪ್ರಕಾಶ್ ಎಲ್. ಶೆಟ್ಟಿ (ಹೈಕೋರ್ಟ್ ವಕೀಲರು, ಮುಂಬೈ) ಸಲಹಾ ಮಂಡಳಿ ಸದಸ್ಯರು. ಸಲಹಾ ಮಂಡಳಿ ಸದಸ್ಯಸಲ್ಲೊಬ್ಬರಾದ ಯಶವಂತ ವಿಟ್ಲ ಅವರು ಕಳೆದ ಕೆಲ ವರ್ಷಗಳಿಂದ ಮುಳಿಯ ಶಂಕರ ಭಟ್ ಅವರ ಅನುಪಸ್ಥಿತಿಯಲ್ಲಿ ಪ್ರಧಾನ ಸಂಪಾದಕತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ವಾಮಯ್ಯ ಬಿ. ಶೆಟ್ಟಿ ಚೆಂಬೂರು, ದಯಾನಂದ ಹೆಗ್ಡೆ ಮುಲುಂಡ್, ಸದಾಶಿವ ಬಿ. ಶೆಟ್ಟಿ ಬಾಂದ್ರಾ, ಜಯಂತ್ ಆರ್. ಪಕಳ ನಲಸೊಪರ, ವಿಶ್ವನಾಥ ಶೆಟ್ಟಿ ಚೆಂಬೂರು, ರಮೇಶ್ ಶೆಟ್ಟಿ ನವಿಮುಂಬೈ, ಶ್ರೀಮತಿ ಸೌಮ್ಯಾ ಕೃಷ್ಣ ಪಿ. ಶೆಟ್ಟಿ ಕುರ್ಲಾ ಹಾಗೂ ಶ್ರೀಮತಿ ಯಶೋದಾ ಕೃಷ್ಣ ಕುಂಬ್ಳೆ ಸ್ಥಾಪಕ ಸದಸ್ಯರು.
ಮಂಗಳೂರಿನ ಪ್ರೇಮ್ ಸಾಯಿ ಪ್ರಿಂಟರ್ಸ್ & ಪಬ್ಲಿಷರ್ಸ್ ನಲ್ಲಿ ಮುದ್ರಣವಾಗುವ "ದತ್ತಪ್ರಕಾಶ"ವು ೫೨ ಪುಟಗಳಲ್ಲಿ ಪುಸ್ತಕ ರೂಪದಲ್ಲಿ ಬರುತ್ತಿದೆ. ಬಿಡಿ ಸಂಚಿಕೆಯ ಬೆಲೆ ೨೫ ರೂಪಾಯಿ. ವಾರ್ಷಿಕ ಚಂದಾ ೧೫೦ ರೂಪಾಯಿ. ಐದು ವರ್ಷಕ್ಕೆ ೭೫೦ ರೂಪಾಯಿಗಳು ಮತ್ತು ಸ್ಥಾಪಕ ಸದಸ್ಯತ್ವ ಮೊತ್ತ ೧೦ ಸಾವಿರ ರೂಪಾಯಿಗಳಾಗಿವೆ. ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ ಲೇಖನಗಳು, ಪುರಾಣ ಪುರುಷರು, ಸಾಧು ಸಂತರ ಜೀವನ ಮೌಲ್ಯಗಳನ್ನು ಸಾರುವ ಲೇಖನಗಳು ದತ್ತಪ್ರಕಾಶದಲ್ಲಿ ಆದ್ಯತೆಯಲ್ಲಿ ಪ್ರಕಟವಾಗುತ್ತವೆ.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (2)
Please Provide Contact Number / address to get subscription of DATTA PRAKASH
ಮಾನ್ಯರೇ, ದತ್ತ ಪ್ರಕಾಶದ ಚಂದಾ ವಿವರಗಳಿಗೆ ಈ ವಿಳಾಸಕ್ಕೆ ಸಂಪರ್ಕಿಸಿ: ಪ್ರಧಾನ ಸಂಪಾದಕರು, "ದತ್ತ ಪ್ರಕಾಶ", ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್, ಅಂಚೆ: ಒಡಿಯೂರು - ೫೭೪೨೪೩, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ. ಮೊಬೈಲ್: ೯೪೪೮೧೭೭೮೧೧. email I'd: [email protected] ಬಿಡಿ ಪ್ರತಿ: ೨೫/- ವಾರ್ಷಿಕ ಚಂದಾ: ೧೫೦/- ೫ ವರ್ಷಕ್ಕೆ: ೭೫೦/-