ಗಡಿನಾಡು ಕಾಸರಗೋಡಿನ "ಕಾರವಲ್"
ಕೇರಳ ರಾಜ್ಯ ಕಾಸರಗೋಡು ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ಕಾಸರಗೋಡು ವಿದ್ಯಾನಗರದಲ್ಲಿರುವ ಇಂಡಸ್ಟ್ರೀಯಲ್ ಎಸ್ಟೇಟ್ ನಿಂದ ಪ್ರಕಾಶನಗೊಳ್ಳುವ ಕಾಸರಗೋಡು ಜಿಲ್ಲೆಯ ಏಕೈಕ ಕನ್ನಡ ದಿನಪತ್ರಿಕೆಯಾಗಿದೆ "ಕಾರವಲ್". ಮಲೆಯಾಳ ಮಾತೃಭಾಷೆಯ ಎಸ್. ರಾಜು ಎಂಬವರು ಕಾರವಲ್ ನ ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲೀಕರು. ಇವರ ಸಹೋದರರಾದ ಸುರೇಂದ್ರ ಎಂಬವರೂ ಪತ್ರಿಕೆಯ ಕೆಲಸ ಕಾರ್ಯಗಳಲ್ಲಿ ಇವರೊಂದಿಗೆ ತೊಡಗಿಸಿಕೊಂಡಿದ್ದಾರೆ. ಇವರು ಕನ್ನಡ " ಕಾರವಲ್" ಜೊತೆಗೆ ಮಲೆಯಾಳದಲ್ಲೂ "ಕಾರವಲ್" ದೈನಿಕವನ್ನು ಹೊರತರುತ್ತಿದ್ದರು.
೧೯೯೯ರಲ್ಲಿ ಆರಂಭವಾದ ಕಾರವಲ್, ಕಳೆದ ೨೭ ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿದೆ. ದಿನ ಪತ್ರಿಕೆ ಆಕಾರದಲ್ಲಿ ನಾಲ್ಕು ಪುಟಗಳಲ್ಲಿ ಬರುತ್ತಿರುವ ಕಾರವಲ್ ನ ಬಿಡಿ ಸಂಚಿಕೆಯ ಬೆಲೆ ಎರಡು ರೂಪಾಯಿ. ಕಾರವಲ್ ಆರಂಭಗೊಳ್ಳುವ ಮೊದಲು "ಗಡಿನಾಡು" , "ಪ್ರತಿಸೂರ್ಯ" , "ಕಾಸರಗೋಡು ಸಮಾಚಾರ" ಮತ್ತು "ಬಯ್ಯಮಲ್ಲಿಗೆ" ಎಂಬ ದಿನ ಪತ್ರಿಕೆಗಳು ಗಡಿನಾಡು ಕಾಸರಗೋಡು ಜಿಲ್ಲೆಯಿಂದ ಪ್ರಕಟವಾಗುತ್ತಿತ್ತು.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!