ಭಾರತ ಜ್ಞಾನ ವಿಜ್ಞಾನ ಸಮಿತಿಯ "ಟೀಚರ್"
ದೇಶದ ಜನವಿಜ್ಞಾನ ಚಳುವಳಿಯ ಭಾಗವಾದ 'ಭಾರತ ಜ್ಞಾನ ವಿಜ್ಞಾನ ಸಮಿತಿ'(ಬಿಜಿವಿಎಸ್)ಯ ಕರ್ನಾಟಕ ರಾಜ್ಯ ಸಮಿತಿಯು ಪ್ರಕಟಿಸುವ ಶೈಕ್ಷಣಿಕ ಮಾಸ ಪತ್ರಿಕೆಯಾಗಿದೆ "ಟೀಚರ್". ಕಳೆದ ೨೪ ವರ್ಷಗಳಿಂದ ಪ್ರಕಟಗೊಳ್ಳುತ್ತಿರುವ ಟೀಚರ್ ಮಾಸಿಕದ ಕಾರ್ಯಾಲಯವು ಬೆಂಗಳೂರು ಹಳೆ ಕೆಮಿಕಲ್ ಇಂಜಿನಿಯರಿಂಗ್ ಕಟ್ಟಡದ ಎರಡನೇ ಮಹಡಿಯಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿದೆ.
೬೦ ಪುಟಗಳಲ್ಲಿ ಪುಸ್ತಕ ರೂಪದಲ್ಲಿ ಹೊರಬರುತ್ತಿರುವ ಟೀಚರ್, ಬೆಂಗಳೂರು ಗೋವಿಂದರಾಜ ನಗರದಲ್ಲಿರುವ ಪ್ರಿಂಟ್ ಹಟ್ ನಲ್ಲಿ ಮುದ್ರಣವಾಗುತ್ತಿದೆ. "ಟೀಚರ್" ನ ಬಿಡಿ ಸಂಚಿಕೆಯ ಬೆಲೆ ₹ ೩೫ ರೂಪಾಯಿ. ವಾರ್ಷಿಕ ಚಂದಾ ಮೊತ್ತ ₹ ೩೮೦ ರೂಪಾಯಿ, ಎರಡು ವರ್ಷಕ್ಕೆ ₹ ೭೦೦ ಮತ್ತು ಮೂರು ವರ್ಷಕ್ಕೆ ಒಂದು ಸಾವಿರ ರೂಪಾಯಿಗಳಾಗಿದೆ.
ಪ್ರೊ. ಬಿ. ಗಂಗಾಧರಮೂರ್ತಿ ಪ್ರಧಾನ ಸಂಪಾದಕರು. ಜಿ. ವಿನುತ ಗೌರವ ಸಂಪಾದಕರು. ಆರ್. ರಾಮಕೃಷ್ಣ ಸಂಪಾದಕರು. ಪ್ರಕಾಶಕರು, ಮುದ್ರಕರು ಮತ್ತು ಮಾಲೀಕರು ಶುಭಂಕರ್ ಚಕ್ರವರ್ತಿ. ಎಫ್. ಸಿ. ಚೇಗರೆಡ್ಡಿ ಹಾಗೂ ಅಹಮದ್ ಹಗರೆ ಸಹಸಂಪಾದಕರು.
ಸತೀಶ್ ಕುಲಕರ್ಣಿ, ಉದಯ ಗಾಂವಕಾರ, ಶ್ರೀದೇವಿ ಕೆರೆಮನೆ, ಕೆ. ಎಸ್. ರವಿಕುಮಾರ್, ಅಬ್ದುಲ್ ಲತೀಫ್ ಹಾಗೂ ಹಫೀಜುಲ್ಲಾ ಸಂಪಾದಕ ಮಂಡಳಿ ಸದಸ್ಯರು. ಪ್ರೊ. ಎಮ್. ಎಸ್. ಶೈಲ, ಪ್ರೊ. ಎಂ. ಆರ್. ಎನ್. ಮೂರ್ತಿ, ಡಾ. ವಿ. ಪಿ. ನಿರಂಜನಾರಾಧ್ಯ, ನಾಗೇಶ ಹೆಗ್ಡೆ, ಚಂದ್ರಪ್ಪ ಹೆಬ್ಬಾಳ್ಕರ್, ಶಂಕರ ಹಲಗತ್ತಿ, ಕೊಳ್ಳೆಗಾಲ ಶರ್ಮ, ಡಾ. ವಸುಂಧರಾ ಭೂಪತಿ ಹಾಗೂ ಬೊಳುವಾರ ಮಹಮ್ಮದ್ ಕುಂಞ ಸಲಹಾ ಮಂಡಳಿ ಸದಸ್ಯರು. ವಿಜ್ಞಾನ ಸಂಬಂಧಿ ಲೇಖನಗಳು, ವೈಜ್ಞಾನಿಕ, ಶೈಕ್ಷಣಿಕ, ಮೌಢ್ಯ ವಿರೋಧಿ ಬರೆಹಗಳು, ವಿಶ್ಲೇಷಣೆಗಳು, ಪ್ರಾಣಿ ಪಕ್ಷಿಗಳು, ಆರೋಗ್ಯವೇ ಮೊದಲಾದವುಗಳ ಕುರಿತಾದ ಮಾಹಿತಿಗಳು ಇತ್ಯಾದಿಗಳು ಮೊದಲ ಆದ್ಯತೆಯಲ್ಲಿ "ಟೀಚರ್" ನಲ್ಲಿ ಪ್ರಕಟವಾಗುತ್ತವೆ.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!