ದಾವಣಗೆರೆಯ ನ್ಯಾಯವಾದಿ ಡಾ. ಕೆ. ಎ. ಓಬಳಪ್ಪರವರ "ಅರಿವು ಅಸ್ಮಿತೆ"
ದಾವಣಗೆರೆಯ ನ್ಯಾಯವಾದಿ, ಕವಿ, ದಸಂಸ ಮತ್ತು ಆರ್. ಪಿ. ಐ ನಾಯಕ, ನ್ಯಾಯಪರ ಹೋರಾಟಗಾರ ಡಾ. ಕೆ. ಎ. ಓಬಳಪ್ಪ ಅವರು ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿ ಕಳೆದ ನಾಲ್ಕು ವರ್ಷಗಳಿಂದ ಪ್ರಕಟಿಸಿ ಕೊಂಡುಬರುತ್ತಿರುವ ಕನ್ನಡ - ಇಂಗ್ಲೀಷ್ ತ್ರೈಮಾಸಿಕವಾಗಿದೆ "ಅರಿವು ಅಸ್ಮಿತೆ".
ಗುಲ್ಬರ್ಗ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿರ್ದೇಶಕರಾದ ಡಾ. ಎಚ್. ಟಿ. ಪೋತೆ, ದಾವಣಗೆರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಕಲಮರಳಿ, ಬೆಂಗಳೂರು ಫ್ರೀಜರ್ ಟೌನ್ ನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ನಾರಾಯಣ ಸ್ವಾಮಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ನಿಂಗಪ್ಪ ಮುದೆನೂರ್ ಹಾಗೂ ದಾವಣಗೆರೆ ಎಂ. ಎಸ್. ಬಿ. ಕಾಲೇಜಿನ ಉಪನ್ಯಾಸಕಿ ಡಾ. ಕಾವ್ಯಶ್ರೀ ಕೆ. ಇವರು ಸಂಪಾದಕ ಮಂಡಳಿ ಸದಸ್ಯರು.
ಪುಸ್ತಕ ಪ್ರಕಾಶನದಲ್ಲಿಯೂ ತೊಡಗಿಸಿಕೊಂಡಿರುವ ಏಕಾಂತ ಗಿರಿ ಟ್ರಸ್ಟ್ ಮೂಲಕ ಈ ಪತ್ರಿಕೆಯ ಪ್ರಕಟಣಾ ಕಾರ್ಯ ನಡೆಯುತ್ತಿದೆ. ದಾವಣಗೆರೆಯ ಲೋಕಿಕೆರೆ ರಸ್ತೆಯಲ್ಲಿರುವ ಜಯಂತ್ ಆಫ್ ಸೆಟ್ ಪ್ರಿಂಟರ್ಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿದೆ.
ನೂರು ಪುಟಗಳಲ್ಲಿ ಪುಸ್ತಕ ಮಾದರಿಯಲ್ಲಿ (ಹೊಸತು ರೂಪದಲ್ಲಿ) ಪ್ರಕಟವಾಗುತ್ತಿರುವ ಅರಿವು ಅಸ್ಮಿತೆಯ ಬಿಡಿ ಸಂಚಿಕೆಯ ಬೆಲೆ ₹ ೨೦೦ ರೂಪಾಯಿ. ವಾರ್ಷಿಕ ಚಂದಾ ₹ ೮೦೦ ರೂ. ಎರಡು ವರ್ಷಕ್ಕೆ ₹ ೧೫೦೦ ರೂ. ಆಜೀವ ಚಂದಾ ₹ ೫೦೦೦ ರೂ. ಮತ್ತು ಪೋಷಕ ಚಂದಾ ₹ ೧೦,೦೦೦ ರೂಪಾಯಿ. ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ವತಂತ್ರ ಲೇಖಕರು ವಿವಿಧ ವಿಷಯಗಳ ಮೇಲೆ ಸಿದ್ಧಪಡಿಸುವ ಸಂಶೋಧನಾ ಪ್ರಬಂಧಗಳು "ಅರಿವು ಅಸ್ಮಿತೆ"ಯಲ್ಲಿ ಮೊದಲ ಆದ್ಯತೆಯಲ್ಲಿ ಪ್ರಕಟಗೊಳ್ಳುತ್ತವೆ.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!