ಕೊಡೆತ್ತೂರು ಸಚ್ಚಿದಾನಂದ ಉಡುಪರ "ಅನಂತ ಪ್ರಕಾಶ"
ಕೊಡೆತ್ತೂರು ಸಚ್ಚಿದಾನಂದ ಉಡುಪ ಅವರು ಸಂಪಾದಕ, ಪ್ರಕಾಶಕ, ಮುದ್ರಕ ಮತ್ತು ಮಾಲಕರಾಗಿ, ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿ ತಾಲೂಕು ಕಿನ್ನಿಗೋಳಿಯಿಂದ ಪ್ರಕಟವಾಗುವ ಮಾಸಪತ್ರಿಕೆಯಾಗಿದೆ "ಅನಂತ ಪ್ರಕಾಶ". ಪ್ರಶಸ್ತಿ ಪುರಸ್ಕೃತ ಯುವ ಪತ್ರಕರ್ತ ಮಿಥುನ ಕೊಡೆತ್ತೂರು ಅವರು ಅನಂತ ಪ್ರಕಾಶದ ಸಹ ಸಂಪಾದಕರು. ಪುಸ್ತಕದ ರೂಪದಲ್ಲಿ (ತುಷಾರ ಮಾದರಿ) ಪ್ರಕಟವಾಗುವ "ಅನಂತ ಪ್ರಕಾಶ", ಕಿನ್ನಿಗೋಳಿ ಬಸ್ ನಿಲ್ದಾಣದ ಬಳಿಯ ಮಂಜರಿ ಕಟ್ಟಡದಲ್ಲಿರುವ "ಅನಂತ ಪ್ರಕಾಶ ಮುದ್ರಣಾಲಯ"ದಲ್ಲಿ ಮುದ್ರಣವಾಗುತ್ತದೆ.
೬೪ + ೪ ಪುಟಗಳ "ಅನಂತ ಪ್ರಕಾಶ"ದ ಬಿಡಿ ಸಂಚಿಕೆಯ ಬೆಲೆ ಎಂಟು ರೂಪಾಯಿಗಳು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಪ್ರಮುಖ ಪತ್ರಿಕೆಗಳ ಅಂಗಡಿಗಳಲ್ಲಿ ಅನಂತ ಪ್ರಕಾಶ ಲಭ್ಯ. ಸಾಹಿತ್ಯದ ವಿವಿಧ ಪ್ರಕಾರಗಳ ಬರೆಹಗಳೊಂದಿಗೆ ವೈವಿಧ್ಯಮಯ ಲೇಖನಗಳು ಇದರಲ್ಲಿ ಪ್ರಕಟವಾಗುತ್ತವೆ.
ಕಳೆದ ಮೂವತ್ತು ವರ್ಷಗಳಿಂದ ಪ್ರಕಟವಾಗುತ್ತಿರುವ "ಅನಂತ ಪ್ರಕಾಶ" ದ ವಾರ್ಷಿಕ ಚಂದಾ ₹ ೧೫೦ ರೂಪಾಯಿ. ದ್ವಿವಾರ್ಷಿಕ ಚಂದಾ ₹ ೨೫೦ ರೂಪಾಯಿ. ಐದು ವರ್ಷದ ಚಂದಾ ₹ ೬೦೦ ರೂಪಾಯಿ. ಆಜೀವ ಸದಸ್ಯತ್ವ ಮೊತ್ತ ₹ ೨೦೦೦ ರೂಪಾಯಿ ಮತ್ತು ಮತ್ತು ಪೋಷಕರಾಗಲು ಐದು ಸಾವಿರ ರೂಪಾಯಿಗಳು.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!