ಕವಿ ಗೋಪಾಲಕೃಷ್ಣ ಅಡಿಗರ "ಸಾಕ್ಷಿ"

ಖ್ಯಾತ ನವ್ಯಕವಿ, ಪ್ರಾಧ್ಯಾಪಕರಾಗಿದ್ದ ಎಂ. ಗೋಪಾಲಕೃಷ್ಣ ಅಡಿಗ ಅವರು ಸಂಪಾದಕರಾಗಿದ್ದುಕೊಂಡು ಪ್ರಕಟಿಸಿದ ತ್ರೈಮಾಸಿಕ ಪತ್ರಿಕೆಯಾಗಿದೆ "ಸಾಕ್ಷಿ". ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಮೊಗೇರಿಯವರಾದ ಗೋಪಾಲಕೃಷ್ಣ ಅಡಿಗರು ಸಾಹಿತಿ ಸುಮತೀಂದ್ರ ನಾಡಿಗ್ ಅವರ ಸಹಾಯ - ಸಹಕಾರದೊಂದಿಗೆ ಸಾಕ್ಷಿಯನ್ನು ಆರಂಭಿಸಿದ್ದರು.

ಸಾಗರದ ಅಕ್ಷರ ಪ್ರಕಾಶನದ ಸಂಚಾಲಕರಾದ ಕೆ. ವಿ. ಸುಬ್ಬಣ್ಣ ಅವರು ಸಾಕ್ಷಿಯ ಪ್ರಕಾಶಕರಾಗಿದ್ದರು. ಪತ್ರಿಕೆ ಸಾಗರದ ಸಾಗರ ಮುದ್ರಣದಲ್ಲಿ ಮುದ್ರಣವಾಗುತ್ತಿತ್ತು. ೧೯೬೨ರಲ್ಲಿ ಆರಂಭವಾದ "ಸಾಕ್ಷಿ", ಸುಮಾರು ಇಪ್ಪತ್ತು ವರ್ಷ ಕಾಲ ಪ್ರಕಟಗೊಂಡು ಕೊನೆಗೆ ಸ್ಥತಗಿತಗೊಂಡಿತು.

ಪ್ರೌಢ ಅನುಭವಗಳಿಗೆ ಮತ್ತು ವಿಚಾರಗಳಿಗೆ ಮೀಸಲಾದ ಪತ್ರಿಕೆ ಎಂಬ ಘೋಷಣೆಯೊಂದಿಗೆ ಪತ್ರಿಕೆ ಪ್ರಕಟವಾಗುತ್ತಿತ್ತು. ಸಂಶೋಧನಾ ಬರೆಹಗಳು, ಸಾಹಿತ್ಯ ವಿಮರ್ಶೆಗಳು, ಲೇಖನಗಳು, ಕವನ ಇತ್ಯಾದಿಗಳು ಪ್ರಕಟವಾಗುತ್ತಿತ್ತು. ವರ್ಷಕ್ಕೆ ನಾಲ್ಕು ಸಂಚಿಕೆಗಳು ಪುಸ್ತಕ ರೂಪದಲ್ಲಿ (ಸಂಕ್ರಮಣ, ರುಜುವಾತು ರೂಪದಲ್ಲಿ) ಮುದ್ರಣವಾಗುತ್ತಿತ್ತು. ವಾರ್ಷಿಕ ಚಂದಾ ಮೊತ್ತ ₹ ೧೨ ರೂಪಾಯಿಗಳಾಗಿತ್ತು.

~ ಶ್ರೀರಾಮ ದಿವಾಣ