ರಾಮ್ ರಾಜ್ ಕಾಟನ್ ರವರ "ಬಿಳುಪು"

ಪ್ರಸಿದ್ಧ ವಾಣಿಜ್ಯೋದ್ಯಮ ಸಂಸ್ಥೆಗಳಲ್ಲಿ ಒಂದಾದ "ರಾಮ್ ರಾಜ್ ಕಾಟನ್" ಸಂಸ್ಥೆಯು ಪ್ರಕಟಿಸುತ್ತಿರುವ ಮಾಸಪತ್ರಿಕೆಯಾಗಿದೆ "ಬಿಳುಪು". ಚೆನ್ನೈ ನ ತಿರುಪುರ್ ನಿಂದ ಪ್ರಕಾಶನಗೊಳ್ಳುವ "ಬಿಳುಪು" ಮಾಸಪತ್ರಿಕೆಯ ಸಂಸ್ಥಾಪಕರು, ಪ್ರಧಾನ ಸಂಪಾದಕರು, ಪ್ರಕಾಶಕರು ಮತ್ತು ಮಾಲೀಕರು ಕೆ. ಆರ್. ನಾಗರಾಜನ್.

೨೦೧೮ರಲ್ಲಿ ಆರಂಭವಾದ "ಬಿಳುಪು" ವಿನ ಮೂಲ ಮತ್ತು ಪ್ರಮುಖ ಖಾಯಂ ಬರೆಹಗಾರರು ತ. ಸೆ. ಜ್ಞಾನವೇಲ್. ಗೌರವ ಸಂಪಾದಕರು ಮತ್ತು ಮೂಲ ಲೇಖನಗಳ ಕನ್ನಡ ಅನುವಾದಕರು ಮದ್ರಾಸ್ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ತಮಿಳ್ ಸೆಲ್ವಿ.

ಚೆನ್ನೈ ನ ವೆಸ್ಟ್ ಮಾಂಬಳಂ ನ ರಾಜು ಸ್ಟ್ರೀಟ್ ನಲ್ಲಿರುವ ತರು ಮೀಡಿಯಾದಲ್ಲಿ ರಚನೆ ಮತ್ತು ವಿನ್ಯಾಸಗೊಳ್ಳುವ ಪತ್ರಿಕೆಯು ೪೦ ಪುಟಗಳನ್ನು ಹೊಂದಿದೆ. "ಬಿಳುಪು" ವಿನ ವಾರ್ಷಿಕ ಚಂದಾ ೨೦0 ರೂಪಾಯಿ, ದ್ವೈವಾರ್ಷಿಕ ಚಂದಾ ೩೮೦ ರೂಪಾಯಿ. ವಿದ್ಯಾರ್ಥಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಚಂದಾ ಮೊತ್ತದಲ್ಲಿ ರಿಯಾಯಿತಿ ಇದೆ. ಪತ್ರಿಕೆಯಲ್ಲಿ ವೈವಿಧ್ಯಮಯ ಲೇಖನಗಳು ಪ್ರಕಟವಾಗುತ್ತವೆ.

~ ಶ್ರೀರಾಮ ದಿವಾಣ