ಹರಿಶ್ಚಂದ್ರ ಪಿ. ಸಾಲಿಯಾನ್ ರವರ "ಹೊಸ ಅಂಗಣ"
ಪತ್ರಿಕಾ ವರದಿಗಾರರೂ, ಅಂಕಣಕಾರರೂ, ಲೇಖಕರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿಯ ಕೊಳಚಿಕಂಬ್ಳ - ಬಪ್ಪತೋಟದ ಹರಿಶ್ಷಂದ್ರ ಪಿ. ಸಾಲಿಯಾನ್ ಅವರು ಹೊರತರುತ್ತಿರುವ ಮಾಸಪತ್ರಿಕೆಯಾಗಿದೆ "ಹೊಸ ಅಂಗಣ".
೨೦೧೬ರ ಸೆಪ್ಟೆಂಬರ್ ಒಂದರಂದು ತಿಂಗಳ ಮೊದಲ ಸಂಚಿಕೆಯೊಂದಿಗೆ ಆರಂಭವಾದ "ಹೊಸ ಅಂಗಣ"ದ ಪ್ರಧಾನ ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲೀಕರು ಹರಿಶ್ಚಂದ್ರ ಪಿ. ಸಾಲಿಯಾನ್ ರವರು. ವಾಸು ಪೂಜಾರಿ ಚಿತ್ರಾಪು, ಜೇಸಿ ದಿನೇಶ್ ಶೆಟ್ಟಿ, ಎಂ. ಬಾಲಕೃಷ್ಣ ನಾಯಕ್ ಹಾಗೂ ಸುರೇಂದ್ರ ಜಿ. ಶೆಣೈ ಅವರು ಉಪ ಸಂಪಾದಕರು.
ಡಾ. ಹರಿಕೃಷ್ಣ ಪುನರೂರು ಗೌರವ ಸಂಪಾದಕರು. ವಿಶ್ವನಾಥ ಕಾಮತ್, ರವಿಚಂದ್ರ ಮೂಲ್ಕಿ, ವಿಜಯಕುಮಾರ್ ಕುಬೆವೂರು, ಡಾ. ರವಿರಾಜ್ ಮುಂಬೈ, ಜೋನ್ ಕ್ವಾಡ್ರಸ್ (ಸುರಭಿ), ರಾಮಚಂದ್ರ ಸಾಲಿಯಾನ್ ಮುಂಬೈ, ಜಯಪಾಲ ಶೆಟ್ಟಿ ಐಕಳ, ಚಿತ್ರಾಪು ಕೆ. ಎಂ. ಕೋಟ್ಯಾನ್, ವೈ. ಎನ್. ಸಾಲಿಯಾನ್, ಸತೀಶ್ ಭಂಡಾರಿ ಮೂಲ್ಕಿ, ಉಮೇಶ್ ಕೆ. ಅಂಚನ್ ಮುಂಬೈ ಹಾಗೂ ಮನೋಹರ್ ಕೋಟ್ಯಾನ್ ಅವರು ಗೌರವ ಸಲಹೆಗಾರರು.
೩೬ ಪುಟಗಳೊಂದಿಗೆ ಪುಸ್ತಕ ರೂಪದಲ್ಲಿ (ತರಂಗ, ಯುಗಪುರುಷ ಮಾದರಿಯಲ್ಲಿ) ಬರುತ್ತಿರುವ "ಹೊಸ ಅಂಗಣ" ದ ಬಿಡಿ ಸಂಚಿಕೆಯ ಬೆಲೆ ೨೦ ರೂಪಾಯಿ. ವಾರ್ಷಿಕ ಚಂದಾ ಮೊತ್ತ ೩೦೦ ರೂಪಾಯಿ. ತ್ರೈವಾರ್ಷಿಕ ಚಂದಾ ಒಂದು ಸಾವಿರ ರೂಪಾಯಿ ಮತ್ತು ಆಜೀವ ಚಂದಾ ಮೊತ್ತ ೩ ಸಾವಿರ ರೂಪಾಯಿ.
ಸಾಹಿತ್ಯ, ಸಂಸ್ಕೃತಿ, ಕಲೆ, ಧಾರ್ಮಿಕ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿವಿಧ ಲೇಖಕರ ವೈವಿಧ್ಯಮಯ ಬರೆಹಳು, ಸಾಧಕರ ಪರಿಚಯ ಮತ್ತು ಆಯ್ದ ವರದಿಗಳು "ಹೊಸ ಅಂಗಣ" ದಲ್ಲಿ ಪ್ರಕಟವಾಗುತ್ತವೆ. ೨೦೨೬ರ ಸೆಪ್ಟೆಂಬರ್ ತಿಂಗಳಲ್ಲಿ ನೂರು ಪುಟಗಳ ದಶಮಾನೋತ್ಸವದ ವಿಶೇಷ ಸಂಚಿಕೆಯ ಬಿಡುಗಡೆ, ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮಗಳೊಂದಿಗೆ "ಹೊಸ ಅಂಗಣ" ದಶಮಾನೋತ್ಸವವನ್ನು ಆಚರಿಸುತ್ತಿದೆ.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!