ಕೇಶವ ಕೊರಂಗ್ರಪಾಡಿಯವರ ‘ಮನೆತನ’
ಉಡುಪಿ ಕೊರಂಗ್ರಪಾಡಿಯ ಒಂದು ಕಾಲದ ದಲಿತ ಸಂಘರ್ಷ ಸಮಿತಿಯ ನಾಯಕರಾಗಿದ್ದ ಕೇಶವ ಕೊರಂಗ್ರಪಾಡಿ ಹಾಗೂ ಪತ್ರಕರ್ತ ಮತ್ತು ಉಪನ್ಯಾಸಕರಾದ ಡಾ. ಶ್ರೀನಿವಾಸ ಹೊಡೆಯಾಲ ಅವರು ಹೊರತರುತ್ತಿದ್ದ ಮಾಸಪತ್ರಿಕೆಯಾಗಿದೆ "ಮನೆತನ".
ಮನೆತನವನ್ನು ಆರಂಭದಲ್ಲಿ ನಡೆಸಿದವರು ಕೇಶವ ಕೊರಂಗ್ರಪಾಡಿ. ಕೆಲ ವರ್ಷಗಳ ಕಾಲ ನಡೆಸಿ ನಂತರ ಸ್ಥಗಿತಗೊಳಿಸಿದ್ದರು. ಈ ಅವಧಿಯಲ್ಲಿ ಕೇಶವ ಅವರೇ ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲೀಕರಾಗಿದ್ದರು. ಇದೇ ಪತ್ರಿಕೆಯನ್ನು ನಂತರ ಕೆಲ ಕಾಲ ನಡೆಸಿ ಸ್ಥಗಿತಗೊಳಿಸಿದವರು ಶ್ರೀನಿವಾಸ ಹೊಡೆಯಾಲರು. ಈ ಅವಧಿಯಲ್ಲೂ ಪತ್ರಿಕೆಯ ಮಾಲೀಕರು ಕೇಶವ ಅವರೇ ಆಗಿದ್ದರು. ಸಂಪಾದಕರು ಶ್ರೀನಿವಾಸ ಹೊಡೆಯಾಲ (ಡಾ. ಶ್ರೀನಿವಾಸ ಎಚ್. ಆರ್.) ಆಗಿದ್ದರು.
ಕೇಶವ ಕೊರಂಗ್ರಪಾಡಿಯವರು ಟ್ಯಾಬ್ಲಾಯ್ಡ್ ರೂಪದಲ್ಲಿಯೂ, ಶ್ರೀನಿವಾಸ ಹೊಡೆಯಾಲರು ದಿನ ಪತ್ರಿಕೆ ಆಕಾರದಲ್ಲಿಯೂ ಪತ್ರಿಕೆಯನ್ನು ಪ್ರಕಟಿಸಿದ್ದರು. ಇದು ಆರು ಪುಟಗಳನ್ನು ಹೊಂದಿತ್ತು. ಶ್ರೀನಿವಾಸ ಹೊಡೆಯಾಲರು ಆರಂಭಿಸಿದ ಮನೆತನದ ಮೊದಲ ಸಂಚಿಕೆ ಪ್ರಕಟವಾಗಿದ್ದು ೨೦೨೧ ಜೂನ್ ತಿಂಗಳಲ್ಲಿ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಂಬಂಧಿತ ಕಾರ್ಯಕ್ರಮಗಳ ಸುದ್ಧಿಗಳು, ಲೇಖನಗಳು, ಸಾಧಕರ ಪರಿಚಯ ಇತ್ಯಾದಿ ವೈವಿಧ್ಯಮಯ ಬರೆಹಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!