ಬುದ್ಧ ವಚನ ಟ್ರಸ್ಟ್ ನ "ಬುದ್ಧ ಧಮ್ಮ"

ಬೆಂಗಳೂರು ಕಾಳಿದಾಸ ರಸ್ತೆಯಲ್ಲಿರುವ ಮಹಾಬೋಧಿ ಸೊಸೈಟಿಯ 'ಬುದ್ಧ ವಚನ ಟ್ರಸ್ಟ್' ಹೊರತರುತ್ತಿದ್ದ ದ್ವೈಮಾಸಿಕ ಪತ್ರಿಕೆಯಾಗಿದೆ "ಬುದ್ಧ ಧಮ್ಮ". "ಬುದ್ಧ ಧಮ್ಮ"ದ ಕೇವಲ ಮೂರು ಸಂಚಿಕೆಗಳಷ್ಟೇ ಪ್ರಕಟಗೊಂಡಿದ್ದು, ನಂತರದ ಸಂಚಿಕೆಗಳು ಪ್ರಕಟಗೊಂಡಿಲ್ಲ.  ೨೦೨೫ ಮತ್ತು ೨೦೨೬ರಲ್ಲಿ ಮೂರು ಸಂಚಿಕೆಗಳು ಪ್ರಕಟಗೊಂಡಿವೆ.

ಪೂಜ್ಯ ಭಿಕ್ಖು ಆನಂದ, ಪೂಜ್ಯ ಭಿಕ್ಖು ಬುದ್ಧದತ್ತ ಹಾಗೂ ಮಹಾದೇವಯ್ಯ ಕೆ. ಸಂಪಾದಕರಾಗಿದ್ದರು. ಡಾ. ಕೆ. ರಾಮಚಂದ್ರ, ಡಾ. ರಾಜೇಂದ್ರ ಪಿ. ಹಾಗೂ ಉಪಾಸಕ ಶ್ರೀ ಕುಮಾರ್ ಕೆ. ಸಂಪಾದಕೀಯ ಮಂಡಳಿ ಸದಸ್ಯರು. ಶ್ರೀಮತಿ ದೀಪ ಎನ್. ವಿ. ಹಾಗೂ ಆಯುಷ್ಮಾನ್ ಶರತ್ ಕುಮಾರ್ ಕೆ. ಪಿ. ಟೈಪಿಂಗ್ ಕೆಲಸಗಳನ್ನು ಮಾಡಿಕೊಡುತ್ತಿದ್ದರು.

ಕಾಟನ್ ಪೇಟೆಯಲ್ಲಿರುವ ಲಕ್ಷ್ಮೀ ಕ್ರಿಯೇಷನ್ಸ್ ನಲ್ಲಿ "ಬುದ್ಧ ಧಮ್ಮ" ಮುದ್ರಣವಾಗುತ್ತಿತ್ತು. ೪೦ + ೪ ಪುಟಗಳ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ೩೫ ರೂಪಾಯಿಗಳಾಗಿತ್ತು. ಬೌದ್ಧ ಧಮ್ಮಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಲೇಖನಗಳು "ಬುದ್ಧ ಧಮ್ಮ" ದಲ್ಲಿ ಪ್ರಕಟಿಸಲಾಗುತ್ತಿತ್ತು.

~ ಶ್ರೀರಾಮ ದಿವಾಣ