ಸಾಂಬಶಿವ ದಳವಾಯಿ ಅವರು ಕರ್ನಾಟಕದ ಹಿರಿಯ ರಂಗಕರ್ಮಿ, ನಟ ಮತ್ತು ನಿರ್ದೇಶಕರು. ೧೯೮೦ರ ದಶಕದಲ್ಲಿ ಕರ್ನಾಟಕದಿಂದ ರಾಷ್ಟ್ರೀಯ ನಾಟಕ ಶಾಲೆಗೆ (NSD) ಆಯ್ಕೆಯಾಗಿದ್ದ ಅಪರೂಪದ ಕಲಾವಿದರಲ್ಲೊಬ್ಬರಾದ ಇವರು, ಬೀದಿ ನಾಟಕಗಳ ಪ್ರಭಾವ ಮತ್ತು ರಂಗಭೂಮಿಯ ಕೌಶಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಅರ್ಥಮಾಡಿಕೊಂಡು ಅಭಿನಯಿಸುವ ಶೈಲಿಗೆ ಇವರು ಹೆಸರುವಾಸಿ.
***
ಸೃಷ್ಟಿಯ ಚಲನ
ಸೃಷ್ಟಿಯ ಚಲನ ಜೀವನ ಮರಣ
ಜೀವ ಜೀವದ ಈ ಮಣ್ಣ
ಮೂರು ದಿನದ ಸಂತೆಯ ಮುಗಿಸಿ
ಸೇರುವರೆಲ್ಲ ಈ ಮಣ್ಣ
ಕಾಡಲಿ ಹುಟ್ಟಿದ ಕೋಗಿಲೆಯ
ದನಿಯೇ ಮಿಗಿಲೆಂದಾಡುವರು
ಕೆಸರಲಿ ಹುಟ್ಟಿದ ತಾವರೆಯ
ದೇವರ ಮುಡಿಯಲಿ ಮುಡಿಸುವರು
ಎಲ್ಲಿದೆಯಣ್ಣ ಮಡಿ ಮೈಲಿಗೆಯು
ಸೃಷ್ಟಿಯ ಮೂಲ ಈ ಮಣ್ಣ
ಮೂರು ದಿನದ ಸಂತೆಯ ಮುಗಿಸಿ
ಸೇರುವರೆಲ್ಲ ಈ ಮಣ್ಣ
ಜಾತಿ ಧರ್ಮ ಮಡಿ ಮೈಲಿಗೆಯ
ಭೇದಭಾವ ಈ ಮಣ್ಣಿಗಿಲ್ಲ
ಬಡವ ಬಲ್ಲಿದ ಧನಿಕನೆಂಬ
ಸ್ಪರ್ಶಾಸ್ಪೃಶ್ಯತೆ ಮಣ್ಣಿಗಿಲ್ಲ
ಯಾರೇ ಬಿತ್ತಿದರೂ ಫಲವನು ಕೊಡುವ
ಪಾವನವಾದ ಈ ಮಣ್ಣಾ
ಮೂರು ದಿನದ ಸಂತೆಯ ಮುಗಿಸಿ
ಸೇರುವರೆಲ್ಲ ಈ ಮಣ್ಣ
(ಗಾನ ವಿಜ್ಞಾನ ಚೇತನ ಕೃತಿಯಿಂದ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!