ನೀ ದೂರವೇ ಇರು, ಬೇಡ ನನಗೆ ನಿನ್ನ ಸನಿಹ.
ಈ ಚೂರು ನೆನಪುಗಳು ಸಾಕು, ಇರಲಿ ನಿನ್ನ ವಿರಹ.

​ಏನಾಗಬೇಕು ನಿನ್ನ ನೋಡಿ ನನಗೆ? ಮಾತೇಕೆ ಬೇಕು ಮರಳಿ ಎನಗೆ?
ಕಣ್ಣು ಮರೆತಿಲ್ಲ ಆ ಮೊದಲನೇ ನೋಟ, ಮಾತೇನು ಉಳಿದಿಲ್ಲ, ಬರಿ ಈಗ ಮೌನ ಪಾಠ.

​ಎಲ್ಲಿದ್ದರೂ ನೀನು, ಕಾಣದ ನಿನ್ನ ನೆರಳು ನಾನು.
ಹೇಗಿದ್ದರೂ ನಾನು, ಮರೆಯದೆ ಗುನುಗುವ ರಾಗ ನೀನು.

​ನೀ ದೂರವೇ ಇರು, ಬೇಡ ನನಗೆ ನಿನ್ನ ಸನಿಹ.
ಈ ಚೂರು ನೆನಪುಗಳು ಸಾಕು, ಇರಲಿ ನಿನ್ನ ವಿರಹ.