ಕಂಡೆ ಆಕಾಶದಲ್ಲಿ ಚಂದದ ನೀಲಿ ಮೋಡ,

ಚಿತ್ರಿಸಲು ತಂದೆ ಬಿಳಿ ಹಾಳೆ ಮತ್ತು ಬಣ್ಣ;

ಬದಲಾಗಿತ್ತು ಮರುಕ್ಷಣ, ಸಾಗುತ ದೂರ.

ಹಾಡುತಿತ್ತು ಮರದ ರೆಂಬೆಯ ಮೇಲೆ ಗುಬ್ಬಿ,

ಅನಿಸಿತು ಕರೆಯಬೇಕೆಂದು ಹತ್ತಿರ ಹೋಗಿ;

ಹಾರಿಹೋಯಿತು ತಟ್ಟನೆ, ದೂರ ಹೆದರಿ.

ಹೊನ್ನ ರಶ್ಮಿ ಬಂದು ಬೆಳಗಿತು ನನ್ನ ಕತ್ತಲೆ ಕೋಣೆಯನು,

ಬಚ್ಚಿಡಲು ಅದನ್ನು,ಮುಚ್ಚಿದೆ ಕಿಟಕಿ ಬಾಗಿಲನು;

ಕತ್ತಲು ಕವಿದು, ಕಾಣದಾಯಿತು ದಾರಿಯು.

ಮುಗಿಯಿತು ಇನ್ನಿಲ್ಲ ಎಂದು ಶರಣಾದೆ ನೊಂದು,

ಬೀಸಿ ಬಿರುಗಾಳಿ,ನಡುಗಿತು ಭೂಮಿ, ಉರುಳಿಸಿ ಮನೆಯನ್ನು.

ಆವರಿಸಿತ್ತು ಬೆಳಕು, ಸುತ್ತಲೂ ಎಲ್ಲೆಲ್ಲೂ ಏನು ಮಾಡದೆ ನಾನು.

- ಶ್ರೀಕಾಂತ್