ಪುಟ್ಟ ಮಗಳು ಕೇಳಿದಳು, "ಅಪ್ಪ, ಏನು ಮಾಡಿಕೊಡಲಿ ಅಡುಗೆ ನಿನಗೆ?"

​ಸುಮ್ಮನೆ ಹೇಳಿದೆ, "ಮಾಡಿಕೊಡು ಉಪ್ಪಿಟ್ಟು, ಕಾಫಿ ನನಗೆ."

​ಹರಿದು ಕಾಗದದ ಚೂರುಗಳನ್ನು ತನ್ನ ಆಟದ ಪಾತ್ರೆಯಲಿ,

​ಕಲಿಸಿದಳು ಮಣ್ಣನ್ನು ನೀರಿನಲಿ ಸಣ್ಣ ಬಣ್ಣದ ಗಡಿಗೆಯಲಿ.

​ಕೊಟ್ಟಳು ಸಿಂಗರಿಸಿ ಚಿಕ್ಕ ತಟ್ಟೆಯಲಿ, ಉಪ್ಪಿಟ್ಟು ಕಾಫಿಯನ್ನು, "ತಿನ್ನು" ಎಂದು.

​ಕಣ್ಣು ಬಾಯಿ ಬಿಟ್ಟು ಕೇಳಿದೆ, "ಮಗಳೇ, ತಿನ್ನಲೇಬೇಕೇ ಇದನ್ನು?" ಎಂದು.

​ತಲೆ ಚಚ್ಚಿ ನಕ್ಕು ಹೇಳಿದಳು, "ಇದು ಬರೀ ತಮಾಷೆ ಅಪ್ಪ!"

​– ಶ್ರೀಕಾಂತ್