ಈ ಹಾಡಿನ ಕೆಲವೇ ಸಾಲನ್ನು ಅನುವಾದ ಮಾಡಿ ಸಂಪದದಲ್ಲಿ ಬಹುಶಃ 48 ನೇ ಸಂಖ್ಯೆ ಕೊಟ್ಟು ಹಂಚಿಕೊಂಡಿದ್ದೆ . ಈಗ ಅದರ ಪೂರ್ಣ ಅನುವಾದ ಇಲ್ಲಿದೆ ನೋಡಿ.

ನಿನಗಾಗಿಯೇ ನಾ ಬದುಕಿಹೆ

ಹೊಲಿದು ತುಟಿಗಳ

ನಿನಗಾಗಿಯೇ ನಾ ಬದುಕಿಹೆ

ತಡೆದು ಕಂಬನಿ

ಎದೆಯಲಿ ಬೆಳಗಿದೆ ಒಲವಿನ ದೀಪ

ನಿನಗಾಗಿಯೇ ನಿನಗಾಗಿಯೇ

ಬದುಕು ನಮಗೆ ತಂದಿದೆ ಹಳೇ ದಿನಗಳ ಪುಸ್ತಕ

ಕವಿದಿವೆ ನಮ್ಮನು ನೆನಪು ಹಳೆಯವು

ಕೇಳದೆಯೇ ನಂಗೆ ಸಿಕ್ಕವು ಎಲ್ಲ ಉತ್ತರ

ಏನು ಬಯಸಿದೆ ಏನು ಸಿಕ್ಕಿದೆ ನನಗೆ ನೋಡಿರಿ

ಎದೆಯಲಿ ಬೆಳಗಿದೆ ಒಲವಿನ ದೀಪ

ನಿನಗಾಗಿಯೇ ನಿನಗಾಗಿಯೇ

ಹೇಳಲಿ ನಾ ಏನನು ಲೋಕ ನಂಗೆ ಮಾಡಿತು

ಆದ್ನೆ ಮಾಡಿತು ನಾನು ಬದುಕಲು ಆದರೆ ನೀನಿಲ್ಲದೆ

ಮುಗ್ಧ ಜನ ಹೇಳುತಾರೆ ನೀ ನನಗೆ ಇಲ್ಲ ಅಂತ

ಎಷ್ಟು ಅನ್ಯಾಯ ಗೈದರು ಈ ಜನ ನಮ್ಮೊಡನೆ

ಎದೆಯಲಿ ಬೆಳಗಿದೆ ಒಲವಿನ ದೀಪ

ನಿನಗಾಗಿಯೇ ನಿನಗಾಗಿಯೇ