ದೀರ್ಘಕಾಲದ ಆಪ್ತ ಸ್ನೇಹವು ನಂಬಿಕೆ ಮತ್ತು ಬದ್ಧತೆಯನ್ನು ಅವಲಂಬಿಸಿದೆ. ನಿಮ್ಮ ಸ್ನೇಹಿತರು ನಿಮ್ಮ ಒಳಿತನ್ನು ಬಯಸುತ್ತಾರೆ ಮತ್ತು ನಿಮ್ಮ ಸ್ನೇಹಕ್ಕೆ ನಿಷ್ಠರಾಗಿದ್ದಾರೆ ಎಂಬ ನಂಬಿಕೆಯಿಂದ ಸ್ನೇಹ ಗಾಢವಾಗುತ್ತದೆ. ನೀವು ಸಂಕಷ್ಟದಲ್ಲಿದ್ದಾಗ ಅವರ ಮೇಲೆ ಭರವಸೆ ಇಡಬಹುದು. ಪ್ರೇಮ ಸಂಬಂಧದಲ್ಲಿಯೂ ಈ ಗೆಳೆತನದ ಮಾದರಿಯನ್ನು ಅನುಸರಿಸಿದರೆ ಹೇಗೆ? ನಿಮ್ಮ ದಾಂಪತ್ಯದಲ್ಲೂ ಸ್ನೇಹವನ್ನು ಬೆಳೆಸಿದರೆ, ನಂಬಿಕೆ ಮತ್ತು ಬದ್ಧತೆಯು ಖಚಿತವಾಗುತ್ತದೆ.
ನಂಬಿಕೆಯು ರಾತ್ರೋರಾತ್ರಿ ಅಥವಾ ದೊಡ್ಡ ಭರವಸೆಗಳಿಂದ ನಿರ್ಮಾಣವಾಗುವುದಿಲ್ಲ. ಪ್ರತಿದಿನದ ಪ್ರಯತ್ನ, ನಿಮ್ಮ ಕೆಲಸ, ಹುಟ್ಟಿದ ಕುಟುಂಬ, ಸ್ನೇಹಿತರು ಮತ್ತು ಹವ್ಯಾಸಗಳಿಗಿಂತ ಹೆಚ್ಚಾಗಿ ನಿಮ್ಮ ಸಂಬಂಧಕ್ಕೆ ಆದ್ಯತೆ ನೀಡಿ. ಬಲವಾದ ಸ್ನೇಹ ಬೆಳೆಸುವುದು, ಸಂಗಾತಿಯ ಬಗ್ಗೆ ಸಕಾರಾತ್ಮಕ ದೃಷ್ಟಿಕೋನ, ಪರಿಣಾಮಕಾರಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡರೆ, "ನಾವು" ಎಂಬ ಬಲವಾದ ಭಾವನೆ ಸಂಗಾತಿಗಳಲ್ಲಿ ಬೇರೂರುತ್ತದೆ. ಯಾವಾಗಲೂ ಪರಸ್ಪರ ಗೌರವ, ಪ್ರೀತಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಬೇಕು.
-ಪ್ರಕಾಶ್ ಎನ್, ಮಂಗಳೂರು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!