ನೀವು ಬಹುಕಾಲದಿಂದ ಒಟ್ಟಿಗಿದ್ದಾಗ, ಪರಸ್ಪರ ಮಾತನಾಡುವಾಗ ವಿನಯವಾಗಿರುವುದನ್ನು ಮರೆಯುತ್ತೇವೆ. ವಿನಯತೆ ಎಂಬುದು ನಾವು ನಮ್ಮ ಸುತ್ತಮುತ್ತಲಿನವರಿಗೆ ಗೌರವವನ್ನು ತೋರಿಸುವ ಒಂದು ಮಾರ್ಗ. ಇದು ನಮ್ಮ ಉದ್ದೇಶಗಳನ್ನು ಮತ್ತೊಬ್ಬರಿಗೆ ಹಿತಕರವಾಗಿ ಮತ್ತು ಕಾಳಜಿಯುಕ್ತವಾಗಿ ತಿಳಿಸಲು ಅನುಕೂಲವಾದ ದಾರಿ. ಆ ಒಳ್ಳೆಯ ನಡತೆ ಅಥವಾ ಶಿಷ್ಟಾಚಾರವು ಪ್ರೀತಿಯಂತೆಯೇ ಕಾಣಿಸುತ್ತದೆ.

ಏನೇ ಆಗಲಿ, ಸಂಗಾತಿಯೊಂದಿಗೆ ಆರಾಮಾಗಿ ಮತ್ತು ನಿರಾಳವಾಗಿರುವುದು ಬಹಳ ಮುಖ್ಯವಲ್ಲವೇ?

ನಿಮ್ಮ ಸಂಗಾತಿ ಏನಾದರೂ ಕೆಲಸ ಮಾಡಿದಾಗ ಅವರಿಗೆ ಧನ್ಯವಾದ ಹೇಳುತ್ತೀರಾ? ನಿಮ್ಮ ಸಂಗಾತಿಯು ಸಮಯಕ್ಕೆ ಸರಿಯಾಗಿ, ಅವರು ಯಾವಾಗಲೂ ಮಾಡುವ ಕೆಲಸವೇ ಆಗಿದ್ದರೂ ಸಹ, ನೀವು 'ಧನ್ಯವಾದ' ಎಂದು ಹೇಳುವ ಮೂಲಕ ನಿಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ.

ನೀವು ಯಾವುದನ್ನಾದರೂ ಕೇಳುವಾಗ "ದಯವಿಟ್ಟು" ಎಂದು ಸೇರಿಸಿ. ನಿಮ್ಮ ಸಂಗಾತಿಯು ಮನೆಗೆ ಬಂದಾಗ ಅಥವಾ ಅವರು ಬಹುಕಾಲ ಬೇರೊಂದು ಕೆಲಸದಲ್ಲಿ ನಿರತರಾಗಿ, ಬಂದಾಗ ಅವರನ್ನು ಮಾತನಾಡಿಸುತ್ತೀರಾ? ಹಾಯ್, ಎಂದಾದರೂ ಹೇಳಿರಿ. ಇವೆಲ್ಲವೂ ಸರಳವಾದ ಹಾವಭಾವಗಳು. ಒಂದು ಸಣ್ಣ "ದಯವಿಟ್ಟು" ಮತ್ತು "ಧನ್ಯವಾದ" ಎಂಬ ಮಾತು, ನೀವು ಪ್ರೀತಿಸುವ ವ್ಯಕ್ತಿಯ ಬಗ್ಗೆ ನಿಮಗಿರುವ ಕಾಳಜಿ ತೋರಿಸುತ್ತದೆ.

ನಿಮ್ಮ ದಾಂಪತ್ಯದಲ್ಲಿ ಸಣ್ಣ ನಡವಳಿಕೆಗಳಿಂದ, ದಾಂಪತ್ಯಕ್ಕೆ ನೀರೆರೆದಂತೆ. ಪ್ರೀತಿ ಮತ್ತು ಮೆಚ್ಚುಗೆಯನ್ನು ಧಾರಾಳವಾಗಿ ಹಂಚಿಕೊಳ್ಳಿರಿ. ಸಂತೋಷ ಹಿಂಬಾಲಿಸುತ್ತದೆ.

(AI Picture)

ಪ್ರಕಾಶ್ ಎನ್, ಮಂಗಳೂರು