ತಂಪಾದ ಗಾಳಿ ಬೀಸಲು ಮೈ ಝುಮ್ಮೆನ್ನಲು, ಬಿಸಿ ಗಾಳಿ ಎಂದು ಸುಳ್ಳು ಹೇಳಲೇ?

​ನೀಲಿ ಬಾನಲಿ ತೇಲುವ ಬಿಳಿ ಮೋಡವ ನೋಡಿ ಹಾರಲು ಮನಸ್ಸಾದರೂ, ಭಾನು ಚಿಕ್ಕದೆನ್ನಲೇ?

​ಮಾವಿನ ಮರೆಯ ಕೋಗಿಲೆಯ ಕೂಗಿಗೆ ಮನ ಇಂಪಾದರೂ, ಬಣ್ಣ ನೋಡಿ ಕಾಗೆ ಎನ್ನಲೇ?

ಸೂರ್ಯಾಸ್ತ ಚೆಲ್ಲಿರುವ ಕಡಲಿನ ಬಣ್ಣವ ಕಂಡು ಮನ ಸೋತರೂ, ಇದು ಬರಿ ಮರೀಚಿಕೆ ಎನ್ನಲೇ?"

​ಆಕಾಶದಲಿ ಹೊಳೆಯುವ ಧ್ರುವತಾರೆಯ ನೋಡಿ ಹಿಂಬಾಲಿಸಲು, ಅದು ಬರಿ ಗುರಿಯಿಲ್ಲದ ಚುಕ್ಕಿ ಎನ್ನಲೇ?

ನಿನ್ನ ಕಣ್ಣಿನ ಮೊದಲನೇ ನೋಟಕೆ,ನನ್ನ ಹೃದಯ ಅರಳಿ ಒಲವು ಮೂಡಿರಲು,ಅದ ನಂಬದೇ, ಬರಿ ಮೋಹವೆನ್ನಲೇ?

​ಸುಳ್ಳಂದುಕೊಳ್ಳಲೇ ನಿಜವನ್ನು? ನಿಜವೇನು ಎಂದು ಪ್ರಶ್ನಿಸಲು ಮೌನವೇ ಉತ್ತರ ಅಂದುಕೊಳ್ಳಲೇ?