ನೀನಿರೆ ನನ್ನ ಹೃದಯದಿ, ಸರಿ-ತಪ್ಪುಗಳ ಹಂಗ್ಯಾಕೆ?
ನಿನ್ನ ಜೀವನವಿದು ಎಲ್ಲಾ, ನಿನಗೇ ಇರಲಿ ನನಗ್ಯಾಕೆ?
ನಾನೆಂಬ ಸುಳ್ಳಿನ ಭಾರವ ಇಳಿಸಿರುವೆ ನೀನು,
ಮೂರು ಲೋಕಗಳ ಹೊತ್ತಿರುವ ನಿನ್ನ ಹೊರಲು ಆನಂದವಾಗಿದೆ ಇಂದು.
ಹಳೆಯ ನಿರಾಸೆಗಳ ಯೋಚಿಸಿ ನಾನೇಕೆ ಅಳಲಿ?
ಸಿಗುವುದೇನೋ ಮುಂದೆ ಎಂದು ಇನ್ನೇಕೆ ಯಾಚಿಸಲಿ?
ನಲಿಯುತಿರೆ ನೀನು ನನ್ನ ಹೃದಯದಿ ಎಲ್ಲವನು ಮರೆಸಿ,
ನಿಶ್ಶಬ್ದವೆನಿಸಿದೆ ಈ ಯಾತ್ರೆ,ಮನಸ್ಸುಗಳ ಜಾತ್ರೆಯಲಿ.
ನೀನೆ ತುಂಬಿರಲು ಎಲ್ಲೆಲ್ಲೂ, ನಾನೆಲ್ಲಿ ಎಂದು ನನ್ನನ್ನು ಹುಡುಕಲು—
ಕಂಡೆ ನಿನ್ನ ಬಿಂಬ, ನನ್ನಲಿ ನಾನೆಂದು!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!