ಆರೋಗ್ಯಕರ ಮತ್ತು ಸಂತೋಷದ ದಾಂಪತ್ಯ ಜೀವನದ ಮೂರನೇ ಹಂತವೆಂದರೆ ದಂಪತಿಗಳ ಸಂಬಂಧವನ್ನು ನಿರಂತರವಾಗಿ ಬಲಪಡಿಸುವುದು. 

ದಂಪತಿಗಳು ಜಂಟಿಯಾಗಿ ಹೊಸ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು.  ಆಟ, ಗಾರ್ಡನಿಂಗ್, ಹೊಸ ವಿಷಯ, ಅಡುಗೆ, ಸಂಗೀತ, ಹೊಸ ಭಾಷೆ ಕಲಿಯುವುದನ್ನು ಹಮ್ಮಿಕೊಳ್ಳಬಹುದು.  ಒಟ್ಟಿಗೆ ಹೊಸ ಹವ್ಯಾಸವನ್ನು ಹೊಂದುವುದು ಸಂಬಂಧಕ್ಕೆ ಹೊಸ ಶಕ್ತಿಯನ್ನು ನೀಡುತ್ತದೆ, ಇದು ದೀರ್ಘಕಾಲದ ಸಂಬಂಧಗಳಲ್ಲಿ ಬಹಳ ಮುಖ್ಯ.  

ನಿಮ್ಮ ಸಂಗಾತಿ ಮಾಡುವ ಒಳ್ಳೆಯ ಕೆಲಸಗಳನ್ನು ಗಮನಿಸಿ, ಅವನ್ನು ಪ್ರಶಂಸಿಸಿ. ನಿಮ್ಮ ಸಂಗಾತಿಯೊಂದಿಗಿನ ಸಮಯವು ಕೇವಲ ದಿನನಿತ್ಯದ ಕೆಲಸಗಳು ಮತ್ತು ವ್ಯವಹಾರಗಳಿಂದ ತುಂಬಿದೆಯೇ? ಇದರಿಂದ ಏಕತಾನತೆ ಹೆಚ್ಚುತ್ತದೆ, ಬೇಸರ ಬರುತ್ತದೆ.  

ಮತ್ತೊಂದು ಪ್ರಯೋಗವೆಂದರೆ, ಒಟ್ಟಿಗೆ ನಗುವ ಪ್ರಯತ್ನ ಮಾಡುತ್ತಿರಿ,  ಸಂಬಂಧದಲ್ಲಿ ಇವು ಮುಖ್ಯ.   ನಿಮ್ಮಿಬ್ಬರಿಗೂ ಒಟ್ಟಿಗೆ ನಗಲು ಏನೇನು ಮಾಡಬಹುದೆಂದು ಯೋಚಿಸಿ.  ಕಾಮಿಡಿ ಸೀರಿಯಲ್ಸ್ ,   ಟೆಲಿ ಫಿಲ್ಮ್ಸ್ ನೋಡಬಹುದು.  ಇವನ್ನು ದಿನಚರಿಯಲ್ಲಿ ಅಳವಡಿಸಿ. ನ್ಯಾಯೋಚಿತವಾಗಿ ಜಗಳವಾಡಿ. ನಿಮ್ಮನ್ನು ನೀವು ಬಲಪಡಿಸಿಕೊಳ್ಳಿ. ನಿಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಿ.

-ಪ್ರಕಾಶ್ ಎನ್, ಮಂಗಳೂರು