ಈ ಚೂರು ಮಳೆಯಲಿ ,ಕಾಡಿನ ಕಲ್ದಾರಿಯಲಿ.
ಹಸಿರಿನ ಗಿರಿ ವನದಲಿ, ಗರಿ ಎಲೆಗಳ ತಿಳಿ ನೆಲದಲಿ.
ಸಾಗುತಿರುವೆ, ಸಾಗುತಿರುವೆ....
ಎಲ್ಲೋ ದೂರದಿ ನದಿ ಹರಿಯುವ ನಾದ,
ಹುಡುಕಿದರೂ ಸಿಗದ ಹಕ್ಕಿಯ ಗಾನ.
ಗಾಳಿಯ ರಭಸಕೆ ಮಳೆ ಜೋರಾದಂತೆ,
ಗಿಡಗಳು ತಂಪಲಿ ಮಿಂದು ನೆಂದಂತೆ.
ಮರಗಳಲ್ಲಿ ಸುಮ ಕೆಂಪೇರಿ ತುಂಬಿದಂತೆ.
ಹಿಮ ಪರ್ವತವ ದೂರದಿ ಅಲಂಕರಿಸಿದಂತೆ.
ಈ ಪ್ರಕೃತಿಯ ಸೌಂದರ್ಯಕೆ ನನ್ನೇ ನಾ ಮರೆತಂತೆ.
ತಾಯಿಯ ಮಡಿಲಲ್ಲಿ ಸುಖವಾಗಿ ಮಗು ನಿದ್ರಿಸುವಂತೆ.