ಎರಡು ವರ್ಷದಿಂದ, ಹೆಚ್ಚಿನ ಪ್ರೋಟೀನ್ ಗಾಗಿ ಫನೀರ್ ಬಳಕೆ ಶುರು ಮಾಡಿದ್ವಿ. ಒಮ್ಮೆ ಡೈರಿಯಿಂದ ಫನೀರ್ ತಂದಾಗ ಡೀಪ್ ಫ್ರೀಝರ್ ನಲ್ಲಿ ಇಟ್ಟಿದ್ದೆವು. ಪ್ಯಾಕೆಟ್ ತೆರೆದ ನಾಲ್ಕು ದಿನದ ನಂತರ ಉಪಯೋಗಿಸಿದ ಫನೀರ್ ಕಹಿ ಇತ್ತು. ಏನೂಂತ ಅರ್ಥ ಆಗಲಿಲ್ಲ. ಮತ್ತೊಮ್ಮೆ ಫನೀರ್ ತಂದಾಗ ಇದೇ ಅನುಭವ ಆಯಿತು. 4-5 ದಿನದ ನಂತರ ಕಹಿ ಬರ್ತಾ ಇದೆಯಲ್ಲ. ಡೀಪ್ ಫ್ರೀಝರ್ ನಲ್ಲಿಟ್ಟರೂ ಸಹ. ವಾಯಿದೆ ಹೋಗಿಲ್ಲ. ಅಂಗಡಿಯವನು ಸಹ ಫ್ರಿಡ್ಜ್ ನಲ್ಲಿಯೇ ಇರಿಸುತ್ತಾನೆ. ನಂಬಲರ್ಹ ವ್ಯಕ್ತಿ. ಮೊದಲೆಲ್ಲಾ ತಂದಾಗ ಹತ್ತು ದನಗಳ ನಂತರವೂ ಬಳಸ್ತಾ ಇದ್ವಿ, ಸರಿಯರ್ತಾ ಇತ್ತು. ಇದಕ್ಕೇನು ಉಪಾಯ. ಅವರ ಗಮನಕ್ಕೆ ತರಲೇಬೇಕಲ್ಲವೇ?
ನಾನೊಬ್ಬ ಡೈರಿಯ ಖಾಯಂ ಗ್ರಾಹಕ, ಫನೀರ್ ಖರೀದಿಸಿದ ದಿನಾಂಕ, ವಾಯಿದೆ ತಾರೀಖು, ಫ್ರಿಡ್ಜ್ ನಲ್ಲಿಟ್ಟ ಬಗೆ ಎಲ್ಲವನ್ನೂ ವಿವರಿಸಿ, ಡೈರಿಯವರಿಗೆ ಮಿಂಚಂಚೆಯಲ್ಲಿ ಫನೀರ್ ಕಹಿಯಾದ ವಿಷಯ ಅವರ ಗಮನಕ್ಕೆ ತಂದೆ. ಫನೀರ್ ನ್ನು ಡೀಪ್ ಫ್ರಿಡ್ಜ್ ನಲ್ಲಿಡಬಾರದು, ಪ್ಯಾಕೆಟ್ ನ್ನು ತೆರೆದ ನಂತರ ಒಂದು ವಾರದೊಳಗೆ ಉಪಯೋಗಿಸಬೇಕು ಏನ್ನುವ ಸಲಹೆಯೊಂದಿಗೆ, ಅಂಗಡಿಯವರ ಮುಖಾಂತರ ನಮಗೊಂದು ಫನೀರ್ ಪ್ಯಾಕೆಟ್ಟನ್ನು ಕಳುಹಿಸಿದರು. ಅವರು ಆ ಪ್ರಾಡಕ್ಟ್ ಬಳಕೆ ಬಗ್ಗೇನೂ ತಿಳಿಸಿದ್ದೂ ಒಳ್ಳೇದೇ ಆಯಿತು. ಈ ಘಟನೆ ಪುನರಾವರ್ತನೆಯಾಗಲಿಲ್ಲ.
ಈಗ ಎರಡು ತಿಂಗಳ ಹಿಂದೆ, ಡೈರಿ ಅಂಗಡಿಯಿಂದ ಒಮ್ಮೆ 500 ಗ್ರಾಂ ಬೆಣ್ಣೆಯ ಪ್ಯಾಕೆಟ್ ತಂದು ಕೂಡಲೇ ಕಾಯಿಸಿದರೆ, ತುಪ್ಪ ಕಸರು ವಾಸನೆಯಿಂದ ಕೂಡಿತ್ತು. ಆಗಲೂ ಡೈರಿಗೆ ಮಿಂಚಂಚೆ ಕಳಿಸಿದೆ. ನಂತರ ಅವರೇ ಫೋನ್ ಮಾಡಿ, ವಿಚಾರಿಸಿ, ಮನೆಗೆ ಬಂದು, ತುಪ್ಪದ ಪರೀಕ್ಷೆ ಮಾಡಿದರು. ಲೇಡಿ ಆಫೀಸರ್ ರೇ ಬಂದಿದ್ರು, ಆ ತುಪ್ಪವನ್ನು ಪರೀಕ್ಷೆಗೆ ತೆಗೆದುಕೊಂಡು ಹೋದರು. ಬದಲಾಗಿ ಬೇರೆ ಬೆಣ್ಣೆ ಪ್ಯಾಕ್ ಕೊಟ್ಟು ಹೋದರು.
ಈ ವ್ಯವಹಾರದಲ್ಲಿ, ಅವರೊಡನೆ ಸಂಘರ್ಷವಿಲ್ಲ, ವಸ್ತುಸ್ಥಿತಿ ತಿಳಿಸಿದ್ದಾಗಿತ್ತು. ಡೈರಿಯವರು ಕೂಡ ಉತ್ತಮ ಪ್ರತಿಕ್ರಿಯೆ ಕೊಟ್ಟರು.
ಪ್ರಕಾಶ ಎನ್ , ಮಂಗಳೂರು.
ಪ್ರತಿಕ್ರಿಯೆ (1)
ಲೇಖನ ಓದಿದ ಬಳಿಕ ಪನೀರ್ ಬಗ್ಗೆ ಇರುವ ಸಂದೇಹಗಳು ದೂರವಾದವು. ಸೊಗಸಾದ ಉಪಯುಕ್ತ ಲೇಖನ