ಬೇತಾಬ್ ಚಿತ್ರದ ಪ್ರೇಮಗೀತೆ 'ಜಬ ಹಂ ಜವಾನ್ ಹೋಂಗೆ' ಯ ಸಂಪೂರ್ಣ ಅನುವಾದ ಇಲ್ಲಿದೆ ನೋಡಿ. (ನಾನು ಕೊಟ್ಟ ಸಂಖ್ಯೆ 583)

ನಾ ದೊಡ್ಡೋನಾದಾಗ ಎಲ್ಲಿ ಇರತೀನೋ

ಆದ್ರೇ ಎಲ್ಲಿ ಇರುತೇನೋ

ಅಲ್ಲಿ ನಿನ್ನ ಬಯಸುವೆನು

ನಿನ ನೆನಪು ಮಾಡುವೆನು ||

ಈ ಬಾಲ್ಯದ ಪ್ರೀತಿಯನ್ನು ಕಳ್ಕೊಂಡ್ರೆ

ಹೃದಯ ಎಷ್ಟು ಖಾಲಿ ಖಾಲಿ ಆಗುವುದು

ನಿನ್ನ ಬಯಕೆಗಳಲ್ಲೇ ಅದ ನಾನು ತುಂಬುವೆನು

ನಿನ ನೆನಪು ಮಾಡುವೆನು ||

ಹೀಗೆ ನಗ್ತಿದ್ಳು

ಅವಳು ಹೀಗೇ ನಡೀತಿದ್ಳು

ಚಂದ್ರನಂತೆ ಮೋಡದಲ್ಲಿ ಅಡಗ್ತ ಇದ್ಳು

ಹೊರಗೆ ಬೀಳ್ತಿದ್ಳು

ಎಲ್ಲರ ಜತೆಗೆ ನಿನ್ನ ಕುರಿತೇ

ಮಾತ ಆಡುವೆನು

ನಿನ ನೆನಪು ಮಾಡುವೆನು ||

ನಿನ್ನ ಸುಂದರ ಕನಸುಗಳ ಸಂಕಲೆಯಿಂದ

ನಿನ್ನ ರೇಷ್ಮೆ ಕೂದಲಿನಿಂದ ಹೇಗೆ

ಸ್ವತಂತ್ರ ಪಡೆಯುವೆನು

ನಿನ ನೆನಪು ಮಾಡುವೆನು ||

ಹಾಡು ಇನ್ನೊಂದು ಪ್ಯಾರಾ ಇದೆ. ಆದರೆ ಇಷ್ಟು ಅನುವಾದ ಸಾಕು ಎಂದು ಇಲ್ಲಿಗೆ ನಿಲ್ಲಿಸಿದ್ದೇನೆ.