ಹಿಂದೆ ಈ ಹಾಡಿನ ಕೆಲವೇ ಸಾಲಿನ ಅನುವಾದ ಮಾಡಿ 41ನೇ ಸಂಖ್ಯೆ ಕೊಟ್ಟು ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ಈಗ ಅದರ ಪೂರ್ಣ ಅನುವಾದ ನಾನು ಮಾಡಿದ್ದು ಅದು ಇಲ್ಲಿದೆ ನೋಡಿ.

ಭೂಮಿ ತಾನು ತಿರುಗದು

ಬಾನು ಕೈಗೆ ಸಿಗುವುದು

ನಿನ್ನ ಮೊಗವು ಕಣ್ಣ ಮುಂದೆ ಬಂದರೆ

ನೀನು ಅನುಮತಿ ಕೊಟ್ಟರೆ

ಸ್ವಲ್ಪ ಪ್ರೀತಿ ಮಾಡುವೆ ನಿನ್ನ ನಾ , ನಲ್ಲೆಯೇ

ನನ್ನ ಹೃದಯ ಕಣ್ಣು ತುಂಬಿಕೊಳ್ಳುವೆ

ನೀನು ಸಿಟ್ಟಿಗೆದ್ದರೂ

ಹಗಲು ನಿನ್ನ ಸೆರಗಲ್ಲಿ ಅವಿತುಕೊಳ್ಳಲಿ

ನೀನು ಬೇಕು ಅಂದರೆ

ಚಂದ್ರನನ್ನೇ ತರುವೆನು

ಒಂದು ತಾರೆ ಬೇಕೆಂದರೆ

ಇಡಿಯ ಆಕಾಶ ನಾ ತರುವೆನು

ನೀನು ನೆನಪಿಗೆ ಬಂದರೆ

ನನ್ನ ನಿದಿರೆಯ ಕದ್ದೊಯ್ದರೆ

ಕನಸ ಲೋಕದಿ ಕಳೆದು ಹೋದರೆ