ನಿಮ್ಮನ್ನು ನೀವು ಬಲಪಡಿಸಿಕೊಳ್ಳಿ (Strengthen Yourself)
ನಿಮ್ಮ ದಾಂಪತ್ಯ ಸುಖಮಯವಾಗಿರಬೇಕೆಂದರೆ, ನಿಮ್ಮ ಸುಸ್ಥಿತಿಯನ್ನು ಅವಲಂಬಿಸಿದೆ. ಇಲ್ಲಿ ಎರಡು ದೃಷ್ಟಿಯಿಂದ ನೋಡೋಣ. ಮೊದಲನೆಯದಾಗಿ, ನೀವು ಸುಸ್ಥಿತಿಯಲ್ಲಿರಿ ಮತ್ತು ಎರಡನೆಯದಾಗಿ, ನಿಮ್ಮ ಸ್ಥಿತಿಯನ್ನು ಉತ್ತಮಗೊಳಿಸುವುದು.
ನೀವು ಚೆನ್ನಾಗಿರಲು ನಿಮಗೇನು ಬೇಕು ಎಂಬುದನ್ನು ಕಂಡುಕೊಳ್ಳಿ. ದೈನಂದಿನ ಸ್ವಯಂ-ಆರೈಕೆ (self-care) ಯೋಜನೆಯನ್ನು ರೂಪಿಸಿ. ನೀವು ಸುಸ್ಥಿತಿಯಲ್ಲಿರಲು ದಿನನಿತ್ಯ ಏನೇನು ಮಾಡಬೇಕು? ಸಾಮಾನ್ಯವಾಗಿ ದೈನಂದಿನ ಸ್ವಯಂ-ಆರೈಕೆ ಪಟ್ಟಿಯಿಲ್ಲಿದೆ. ಏನೋ ಸರಿಯಿಲ್ಲವೆನಿಸುತ್ತದೆಯೆಂದರೆ, ಈ ಕೆಳಗಿನವುಗಳಲ್ಲಿ ಯಾವುದೊಂದು ಮಿಸ್ ಆಗಿರುತ್ತದೆ.
೧. ನಿಯಮಿತವಾಗಿ ರಾತ್ರಿ ಉತ್ತಮ ನಿದ್ರೆ,
೨. ಪೌಷ್ಟಿಕ ಆಹಾರ ಮತ್ತು ಸಾಕಷ್ಟು ನೀರು ಸೇವನೆ,
೩. ವ್ಯಾಯಾಮ,
೪. ಕ್ರಿಯೇಟಿವ್ ಆಗಿರುವುದು,
೫. ಯಾರಿಗಾದರೂ ಸಹಾಯ ಮಾಡುವುದು,
೬. ಮನಸ್ಸನ್ನು ಸುಸ್ಥಿತಿಯಲ್ಲಿರಿಸಲು ಧ್ಯಾನ / ಪ್ರಾಣಾಯಾಮ ಮಾಡುವುದು
೭. ನಿಮ್ಮ ವೈಯಕ್ತಿಕ ಅಗತ್ಯಗಳ / ಯೋಜನೆಗಳ ಬಗ್ಗೆ ಚಿಂತಿಸಲು ಸ್ವಲ್ಪ ಸಮಯ ಮೀಸಲಿಡಿ.
ನಿಮ್ಮ ಜೀವನದ ಯಾವ ವಿಭಾಗವನ್ನು ಉತ್ತಮಗೊಳಿಸಲು ಪ್ರಯತ್ನಿಸುವಿರೆಂದು ಯೋಚಿಸಿ, ಒಂದು ಭಾಗವನ್ನು ಆಯ್ಕೆಮಾಡಿ. (ಉದಾಹರಣೆಗೆ: ಆರೋಗ್ಯ, ವೃತ್ತಿಜೀವನ, ಸ್ನೇಹ, ಶಿಕ್ಷಣ, ಬಿಡುವಿನ ಸಮಯ, ಹಣಕಾಸು). ಆ ಕ್ಷೇತ್ರಕ್ಕೆ ನಿಮಗೆ ನೀವೇ ಅಂಕಗಳನ್ನು ನೀಡಿ. 1 ಎಂದರೆ ತಳ ಮಟ್ಟ. 10 ಎಂದರೆ ಅತ್ಯುತ್ತಮ ಸ್ಥಿತಿ. ನಿಮ್ಮ ಜೀವನದ ಆ ಭಾಗವನ್ನು ಸುಧಾರಿಸಲು ಈ ತಿಂಗಳು ನೀವೇನು ಮಾಡಬಹುದು? ನೀವು ೩ ರಲ್ಲಿದ್ದರೆ, ಮೇಲೇರಲು ಸಣ್ಣ ಪ್ರಯತ್ನಗಳನ್ನು ಮಾಡಿ, ೩.೧, ೩.೨ ಹೀಗೆ.
ಮುಂದಿನ ಸಂಚಿಕೆಯಲ್ಲಿ ಚರ್ಚೆ ಮುಂದುವರಿಸೋಣ
AI pic
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!