ನೀವು ಹೆಜ್ಜೆ ಇಟ್ಟು ನಡೆದಿರಬಹುದು, ತುಂಬಾ ದೂರದವರೆಗೆ ಇದೇ ಪುಟ್ ಪಾತ್ ಮೇಲೆ ಹೆಜ್ಜೆ ಇಟ್ಟಾಗಿರಬಹುದು, ಆದರೆ ನಿಮ್ಮ ಪಾದಕ್ಕಿಂತ ಹೆಚ್ಚಾಗಿ ನಮ್ಮವರ ಬೆನ್ನುಗಳು ಈ ನೆಲದ ಸ್ಪರ್ಶವನ್ನು ಅರಿತುಕೊಂಡಿದೆ. ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಇಲ್ಲೇ ಉಸಿರು ನಿಲ್ಲಿಸಿದ್ದಾರೆ ಎಲ್ಲ ನೋವನ್ನ ಮರೆತು ನೆಮ್ಮದಿಯ ನಿದ್ರೆಯನ್ನು ಕಳೆದಿದ್ದಾರೆ, ನಿಮಗೆ ಅದು ಗಲೀಜು ಅನ್ನಿಸಬಹುದು ಆದರೆ ನಮಗೆ ಯಾವುದೇ ಮೇಲುಕೀಳಿನ ಭಾವವಿಲ್ಲದೆ ಎಲ್ಲರೂ ಒಂದಾಗಿ ಸಾಗುತ್ತಿದ್ದೇವೆ, ಓಡಾಟದ ಮಾತುಗಳು, ನೋವಿನ ಹೆಜ್ಜೆ, ನಗುವಿನ ಮೃದು ಸ್ಪರ್ಶ, ಎಲ್ಲವನ್ನ ಈ ಪುಟ್ ಪಾತ್ ನಮಗೆ ಹೇಳಿಕೊಟ್ಟಿದೆ. ಹಾಗಾಗಿ ನೆಲವನ್ನೇ ಅಪ್ಪಿ ಮಲಗಿದ ಕಾರಣ ನಮ್ಮೊಳಗೆ ಜಗಳವಿಲ್ಲ ಹೊಡೆದಾಟವಿಲ್ಲ ಕೋಪ ಅಸೂಯೆಯ ಸುದ್ದಿ ಇಲ್ಲ ಹಾಗಾಗಿ ನೀವು ನೆಲವನ್ನ ನಂಬಿದರೆ ನಿಮ್ಮ ಬದುಕು ಅದ್ಭುತವಾಗಿರುತ್ತದೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!