ಮಸಣದಲ್ಲಿ ಸಾಲು ಸಾಲು ಗೋರಿಗಳು ಹಾಗೆ ನಿಂತುಬಿಟ್ಟಿವೆ, ಕೆಲವೊಂದು ಅಲ್ಲಿ ಗೋರಿಯಿದ್ದ ಕುರುಹನ್ನೇ ಕಳೆದುಕೊಂಡುಬಿಟ್ಟಿದೆ. ಕೆಲವೊಂದು ಬಣ್ಣಗಳಿಂದ ತುಂಬಿಕೊಂಡು ಸ್ವಚ್ಛ ಮಾಡುವವರಿಲ್ಲದೆ ತನ್ನ ರೂಪವನ್ನು ವಿಕೃತಗೊಳಿಸಿಕೊಂಡಿದೆ .

ಇಷ್ಟೆಲ್ಲ ಘಟನೆಗಳ ನಡುವೆ ಗೋರಿಯೊಳಗಿದ್ದವರು ಹೊರಬಂದು ಮಾತನಾಡುವುದಕ್ಕೆ ಶುರುಮಾಡಿದರು, ಅಲ್ಲ ನಮ್ಮ ಬದುಕೇಕೆ ಹೀಗೆ ಜೀವನದಲ್ಲಿ ಎಲ್ಲವನ್ನು ಮಾಡಿದರೂ ಸಹ ಸತ್ತ ಮೇಲೆ ನಾವು ಯಾರಿಗೂ ನೆನಪಿಲ್ಲದಂತಾಗಿದೆ, ಇಲ್ಲೊಂದು ಗೋರಿಗೆ ಇನ್ನು ಕೂಡ ಜನ ಬಂದು ನಮಿಸಿ ಗೌರವಿಸಿ ಹೊರಡುತ್ತಾರೆ ಅಂದ್ರೆ ಆತ ನನಗಿಂತ ವಿಶೇಷವಾಗಿ ಬದುಕಿದ್ಯೋ ಏನೋ. ಸಮಾಜಕ್ಕೆ ಹೆಚ್ಚು ಹೆಚ್ಚು ಕೊಟ್ಟು ತುಂಬಾ ಅದ್ಭುತ ವ್ಯಕ್ತಿ ಅನ್ನಿಸಿಕೊಂಡ ಕಾರಣ ಆತನನ್ನ ಈಗಲೂ ಗೌರವಿಸ್ತಾರೆ, ನನಗೆ ಬದುಕಿದ್ದಾಗಲೇ ಗೌರವ ಸಿಗಲಿಲ್ಲ ಸತ್ತ ಮೇಲೆ ಗಮನಿಸುವವರು ಇಲ್ಲ ಶಾಶ್ವತವಾಗಿ ಉಳಿಬೇಕು ಅಂತಾದರೆ ಬದುಕಿದ್ದಾಗ ಸಮಾಜಕ್ಕೆ ಏನಾದರೂ ನೀಡುವ ಕೆಲಸವಾಗಬೇಕು ಸಮಾಜ ಕಳೆದುಕೊಂಡ ಮೇಲೆ ಕಣ್ಣೀರಿಡುವಂತಾಗಬೇಕು ಅಂತಹ ಬದುಕು ಬದುಕಿದ್ರೆ ಮಾತ್ರ ಬದುಕಿಗೆ ಒಂದು ಅರ್ಥ ಅದನ್ನು ಅರ್ಥೈಸಿಕೊಂಡು ಹೊರಗಿದ್ದವರು ಮತ್ತೆ ಒಳ ಹೊಕ್ಕು ಸುಮ್ಮನೆ ಮಲಗಿಬಿಟ್ಟರು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ