ತರಗತಿಯಲ್ಲಿ ಮಕ್ಕಳಿಗೆ ಮತ್ತೆ ಮತ್ತೆ ಉಪದೇಶ ಮಾಡುತ್ತಿದ್ದ ಉಮೇಶ, ಸಹಾಯ ಮಾಡುವುದು ನಮ್ಮ ರಕ್ತದಲ್ಲೇ ಬರಬೇಕು, ಸಮಯ‌ ಸಿಕ್ಕಾಗ ಅವಕಾಶ ತಪ್ಲಿಸಿಕೊಳ್ಳಬಾರದು, ಹೀಗೆ ಪ್ರತೀ ದಿನ‌ ಇತರರಿಗೆ ಸಹಾಯ ಮಾಡುವುದ್ದನ್ನೇ ಉಪದೇಶ ಮಾಡುತ್ತಿದ್ದ. ಮಕ್ಕಳಿಗೋ ಇವನ‌ ಮಾತನ್ನ ಗೌರವದಿಂದ ಒಪ್ಪಿಕೊಂಡರು ಆದರ್ಶ ವ್ಯಕ್ತಿಯಾಗಿ ಪೂಜಿಸಿದರು. ಆ ದಿನ ತುಂಬಿದ ಬಸ್ಸಿನಲ್ಲಿ ವಯಸ್ಸಾದವರು ಹತ್ತಿದಾಗ ಅವರಿಗೆ ಸೀಟು ಬಿಟ್ಟು ಕೊಡದೆ ನಿದ್ದೆ ಬಂದಂತೆ ನಟಿಸಿದ, ವಯಸ್ಸಾದ ವ್ಯಕ್ತಿ ಕಷ್ಟು ಪಟ್ಟು ನಿಂತು ಎರಡು ಸಲ ಮುಗ್ಗರಿಸಿ ಬಿದ್ದರು, ಅದೇ ಬಸ್ಸಿನಲ್ಲಿದ್ದ ವಿದ್ಯಾರ್ಥಿ ಅವರಿಗೆ ಸೀಟು ಬಿಟ್ಟು ಕೊಟ್ಟ. ತಲೆ ತಗ್ಗಿಸಿದ ಉಮೇಶ ಮತ್ತೆ ತಲೆ ಎತ್ತಲಿಲ್ಲ. ಆದರ್ಶವೆಲ್ಲ ಬಸ್ಸಿನ ಹೊಗೆಯಂತೆ ಅಲ್ಲೇ ಕರಗಿ ಮಾಯವಾಯಿತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ