ಕಳೆದುಕೊಳ್ಳಬೇಡ, ಮತ್ತೆಂದೂ ದಕ್ಕುವುದಿಲ್ಲ, ಒಂದಷ್ಟು ಹೋರಾಟ, ಅಹಂಕಾರವ ಬದಿಗಿಟ್ಟರೆ ಒಳಿತೆಲ್ಲವೂ ನಿನ್ನ ಪಾಲಿಗೆ ದೊರಕುತ್ತದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರೂ, ಇಬ್ಬರಿಗೂ ಒಪ್ಪಿಗೆ ಇತ್ತು. ಬದುಕಿನ ದಾರಿಗಳು ಬದಲಾದಾಗ ಮನಸ್ಸಲ್ಲಿ ಪ್ರೀತಿ ತುಂಬಿದ್ದರೂ ಮಾತುಗಳು ಕಡಿಮೆಯಾದವೂ ಸಣ್ಣ ವಿಚಾರಗಳು ದೊಡ್ಡ ಗೋಡೆ ಕಟ್ಟಿದವು, ಹಾಗೆಯೇ ದೂರವಾಗುವ ನಿರ್ಧಾರ ಮಾಡಿದರೂ, ಬದುಕಿನ ಅವಕಾಶಕ್ಕೆ ಹೊಸ ಮುಖಗಳ ಪ್ರವೇಶವಾಗಬಹುದು ಆದರೆ, ತುಂಬಾ ಜತನವಾಗಿ ಕಾಪಿಟ್ಟುಕೊಂಡ ಮೊದಲ ಪ್ರೀತಿ ಸಿಗಲಿಕ್ಕಿಲ್ಲ, ಮತ್ತೊಮ್ಮೆ ಕುಳಿತು ಮಾತನಾಡಿ ಅಹಂನ ಮುಖವಾಡವ ಬದಿಗಿಟ್ಟು ಒಂದಷ್ಟು ಹೆಜ್ಜೆ ಹಾಕಿ, ಇಷ್ಟು ದಿನ ಕಳೆದುಕೊಂಡದ್ದು ಅರಿವಾಗಬಹುದು, ಮತ್ತೆ ಜೀವನಪೂರ್ತಿ ಹೆಜ್ಜೆಹಾಕುವ ಅವಕಾಶ ಸಿಗಬಹುದು. ಕಳೆದುಕೊಳ್ಳುವ ಮೊದಲು ಎಚ್ಷೆತ್ತುಕೊಳ್ಳಿ ಬದುಕು ನಿಮ್ಮದು, ನಿಮ್ಮದು ಮಾತ್ರ, ಹೀಗಂದವರು ಬಾಳಸಂಜೆಯಲ್ಲಿ ಬದುಕನ್ನ ಪ್ರೀತಿಸಿದ ವೇದವ್ಯಾಸರು. ಆದರೆ ಕೇಳುವವರಿಗೆ ಅರ್ಥವಾದ ಯಾವ ಲಕ್ಷಣವೂ ಕಾಣಲೇ ಇಲ್ಲ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!