ಕಾಗದದ ಹೂವಿನಂತಾಗಬೇಕು, ಅದು ಅದ್ಭುತವಾದ ಬದುಕು, ಸುವಾಸನೆ ಬೀರುವ ಹಂಗಿಲ್ಲ, ಬೇಸರವಿಲ್ಲ ಬರಿಯ ಹೂವಾಗಿ ಅರಳಿ ಮುಳ್ಳಿನ ನಡುವೆ ಇರೋದ್ದಕ್ಕೆ, ಬಣ್ಣ ಬಣ್ಣಗಳಿಂದ ತುಂಬಿದರೂ ಎಲ್ಲರೂ ನೋಡಬೇಕೆಂಬ ಹಂಬಲವಿಲ್ಲ, ನೀರು ಹಾಕಬೇಕೆಂದಿಲ್ಲ ಹಾಕದಿದ್ದರೂ ಕೂಡ ತನ್ನಿಂದ ಸಾಧ್ಯವಾಗುವವರೆಗೂ ನೋಡುಗರಿಗೆ ಸಂತೋಷ ಕೊಡುತ್ತದೆ. ಆದರೂ ಸಂತೋಷ ಕೊಡಲೆಂದೇ ಅರಳುವುದಲ್ಲ, ಬೆಳಗ್ಗೆ ಅರಳಿ ಸಂಜೆಗೆ ಬಾಡಿ ಕೆಳಗೆ ಬಿದ್ದು ಒಣಗಿ ಹೋಗುತ್ತದೆ ದೇವರ ಮೂಡಿಗೆ ಸೇರಬೇಕೆಂಬ ಆಸೆಯಿಲ್ಲ. ಬರಿಯ ಹೂವಾಗಿ ಅರಳಿ ನಿಲ್ಲುತ್ತದೆ ಯಾರೂ ಗಮನಿಸುವುದಿಲ್ಲ ಹಾಗಿರುವ ಬದುಕು ನಮ್ಮದಾಗಬೇಕು. ನಾವೇ ಅದನ್ನ ಅರ್ಥೈಸಿಕೊಂಡು ಅದರಂತೆ ಬದುಕು ಬಿಡಬೇಕು ಇದನ್ನ ಒಂದು ದಿನವೂ ಕಾಗದದ ಹೂವು ಹೇಳಲೇ ಇಲ್ಲ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ