ದುಡಿದ ಕೈಗಳು ಮಾತ್ರ ವೇದಿಕೆಯ ಮೇಲೆ ಗೌರವಿಸಲ್ಪಡಬೇಕು. ದುಡಿದ ಕೈಗಳಿಗೆ ಮಾತ್ರ ಬೆವರಿನ ವಾಸನೆ, ಗೌರವದ ಬೆಲೆ ಮಣ್ಣಿನ ರುಚಿ ತಿಳಿದಿರುತ್ತದೆ. ದುಡಿದ ಕೈಗಳು ತಮ್ಮ ರೂಪವನ್ನು ಕಳೆದುಕೊಂಡಿರುತ್ತವೆ ದುಡಿದ ಕೈಗಳು ಬಲಶಾಲಿಯಾಗಿರುತ್ತದೆ ದುಡಿದ ಕೈಗಳಿಗೆ ಪ್ರಶಂಸೆಗಳು ಎದುರಾಗಬೇಕು. ಪ್ರಶಂಸೆಗಳು ಸಿಗುವಾಗ ದುಡಿಯುವ ಕೈಗಳಾಗಿದ್ದರೆ ಮಾತ್ರ ಅದನ್ನ ಸ್ವೀಕರಿಸಿ ತನ್ನದಲ್ಲದಿದ್ದರೆ ಅಲ್ಲಿಂದ ಹಿಂಜರಿಯುವ ಮನಸ್ಸು ಮಾಡಬೇಕು. ಇದೆಲ್ಲವೂ ದುಡಿಯುವ ಕೈಗಳಿಂದ ಮಾತ್ರ ಸಾಧ್ಯವಾಗುವಂತೆ ದುಡಿಯುವ ಕೈಗಳನ್ನ ಸುತ್ತಮುತ್ತ ಗಮನಿಸಿ ಗೌರವಿಸಿ ಆಗ ದುಡಿಯುವ ಕೈಗಳು ಹೆಚ್ಚಾಗುತ್ತವೆ ಇನ್ನೊಂದಷ್ಟು ಹೊಸ ದುಡಿಯುವ ಕೈಗಳನ್ನು ಪ್ರೇರೇಪಿಸುತ್ತದೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ