ಪರ ಊರಿನಲ್ಲೋ ಊರ ಮದ್ಯದಲ್ಲೋ ಕಾಣುತ್ತಿದ್ದ ಕೇಳುತ್ತಿದ್ದ ಘಟನೆಗಳು ನಮ್ಮ ನಡುವೆ ನಮ್ಮವರಿಗಾದಾಗ ಮಾತ್ರ ಅದರ ತೀವ್ರತೆ ಅರ್ಥವಾಗುತ್ತದೆ. ಹೀಗಾಗಬಾರದಿತ್ತು ಅನ್ನುವ ಮಾತುಗಳೇ ಎಲ್ಲಾ ಕಡೆಯೂ ಓಡುತ್ತಿರುತ್ತವೆ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಬದುಕು ಸಾವಿರ ಹೆಜ್ಜೆಗಳನ್ನ ದಾಟಿರುತ್ತದೆ. ನಮ್ಮ ಮನೆಯ ಬೈಕು ಮೊದಲಾದರೆ ಎಲ್ಲಾ ಕಡೆಗೂ ನನ್ನ ಕರೆದೊಯ್ಯುವ ಕೆಲಸಗಾರನಾಗಿದ್ದ. ಈಗ ತುಂಬಾ ಜತನವಾಗಿ ನನ್ನ ಬದುಕನ್ನು ಕಟ್ಟಿಕೊಟ್ಟ ಆತ್ಮೀಯ ಎನಿಸಿದ್ದಾನೆ. ಪೊಲೀಸ್ ಕಂಡಾಗ ಮಾತ್ರ ತಲೆಗೆ ಏರುತ್ತಿದ್ದ ಹೆಲ್ಮೆಟುಗಳು ತಲೆಯೊಳಗೆ ಈಗ ಪ್ರತಿಕ್ಷಣವೂ ಕುಳಿತುಕೊಂಡಿವೆ. ಆತ ಭಯವನ್ನು ಬಿಟ್ಟು ಹೋದದ್ದಲ್ಲ ಬದುಕಿನ ಪಾಠಗಳನ್ನು ಕೊಟ್ಟು ಹೋದದ್ದು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ