ಅವರು ಓಡಾಟ ಇನ್ನು ನಿಂತಿಲ್ಲ. ವಯಸ್ಸು ಮುಗಿಯುವ ಹಂತದಲ್ಲಿದೆ. ದೇಹದಲ್ಲಿ ಶಕ್ತಿ ಕಡಿಮೆಯಾಗಿದೆ. ಆದರೂ ಸರಕಾರಿ ಕಚೇರಿಯನ್ನು ಮತ್ತೆ ಮತ್ತೆ ಸುತ್ತುವ ಕರ್ಮ ಅವರನ್ನು ಬಿಟ್ಟಿಲ್ಲ. ಅವರೇನು ಬೇಡುವ ಸ್ಥಿತಿಯವರಲ್ಲ. ಹಿಂದೆ ದೇಶ ಕಾದದ್ದಕ್ಕೆ ಅದ್ಭುತ ಕೆಲಸ ಮಾಡಿದ್ದಕ್ಕೆ ದೊಡ್ಡ ರಾಜಕಾರಣಿಯೊಬ್ಬರು ದೊಡ್ಡ ವೇದಿಕೆಯಲ್ಲಿ ಅವರಿಗೆ ನೀಡುತ್ತೇವೆ ಅಂತ ಆಶ್ವಾಸನೆ ಕೊಟ್ಟ ಜಮೀನಿನ ವಿಷಯವದು. ಆ ಆಶ್ವಾಸನೆ ಪತ್ರದಲ್ಲೂ ಇತ್ತು ದಿನ ಪತ್ರಿಕೆಯಲ್ಲಿ ಅಚ್ಚೊತ್ತಿಬಿಟ್ಟಿತ್ತು. ಸುದ್ದಿ ಊರಿನವರೆಲ್ಲರಿಗೂ ತಿಳಿದಿತ್ತು .ಅದರಿಂದ ಮಂತ್ರಿಯ ವರ್ಚಸ್ಸು ಹೆಚ್ಚಿತ್ತು. ವರ್ಷಗಳು ದಾಟಿದ ಹಾಗೆ ಇವರ ಓಡಾಟ ಜಮೀನನ್ನು ಪಡೆದುಕೊಳ್ಳುವ ವಿಚಾರದಲ್ಲಿ ಮುಗಿಯುತ್ತಾ ಬಂತು. ಎಷ್ಟೇ ಅಲೆದಾಡಿದರೂ ಕೂಡ ಆ ಜಮೀನು ಎಲ್ಲಿದೆ ಅನ್ನೋದು ಇವರಿಗೆ ತಿಳಿಯಲೇ ಇಲ್ಲ ಈಗ ಜನನಾಯಕನಿಗೆ ಇವರ ಹೆಸರೇ ಮರೆತೋಗಿದೆ. ಇಡೀ ಲೋಕ ಅದನ್ನು ಮರೆತುಬಿಟ್ಟಿದೆ. ದೇಶ ಕಾದವನು ತನ್ನ ಜಮೀನಿಗಾಗಿ ಸರಕಾರಿ ಕಚೇರಿಯ ಮುಂದೆ ಈಗಲೂ ಕಾಯುತ್ತಿದ್ದಾನೆ....

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ