ಭಗವಂತ ನಿನ್ನ ಬಳಿ ನನ್ನದೊಂದು ಬೇಡಿಕೆ. ಈ ಮೊಬೈಲ್ ನ ಒಳಗೆ ನೀನೇ ಇಟ್ಟು ಬಿಟ್ಟಿದ್ದೀಯ ಅದನ್ನ ನನ್ನೊಳಗೆ ಇಟ್ಟುಬಿಡು. ನಾನು ಅದರಂತೆ ಮಾಡುವ ಹಾಗೆ ಮಾಡಿಬಿಡು, ನಾನು ಅದರಂತೆ ಸೆಳೆಯುವ ಹಾಗೆ ಮಾಡಿಬಿಡು ಯಾಕೆಂದರೆ ನನ್ನ ಮಕ್ಕಳು ನನಗಿಂತ ಹೆಚ್ಚಾಗಿ ಮೊಬೈಲನ್ನು ಹಿಡಿದುಕೊಂಡಿದ್ದಾರೆ ನಾನು ಬಡಿಸಿದ ಅನ್ನದ ಸಾಂಬಾರಿನ ರುಚಿ ತಿಳಿಯುವುದಿಲ್ಲ, ಕೆಲಸಕ್ಕೆ ಕರೆದಾಗ ಪುರುಸೊತ್ತಿಲ್ಲ ನನ್ನ ಮುಖದಲ್ಲಿರುವ ನೋವು ಖುಷಿಯನ್ನು ಗಮನಿಸುವುದಕ್ಕಾಗುವುದಿಲ್ಲ, ಹೇಳಿದ ಕೆಲಸ ಕಿವಿಗೆ ತಲುಪುತ್ತಿಲ್ಲ, ಹೇಳದೆ ಉಳಿದ ಮಾತುಗಳು ಅವರಿಗಿನ್ನು ಅರ್ಥವಾಗಿಲ್ಲ, ಆದರೆ ಮೊಬೈಲ್ ಒಂದು ಕ್ಷಣ ಮೌನವಾಗಿ ಬಿಟ್ಟರೆ ಅದನ್ನು ಸರಿಪಡಿಸುವುದಕ್ಕೆ ಎಲ್ಲಿಂದ ಎಲ್ಲಿಗೂ ಓಡಾಡಿ ಬಿಡುತ್ತಾರೆ, ಅದೇ ನಾನು ಮೊನ್ನೆ ಹೊಟ್ಟೆ ನೋವು ಜ್ವರವೆಂದು ಕೂಗಾಡಿದಾಗ ಕೈಯಲ್ಲಿ ದುಡ್ಡು ಇಟ್ಟು ಮಾಯವಾಗಿ ಬಿಟ್ಟರು, ಕೈಯಲ್ಲಿರುವ ಮೊಬೈಲ್ ಅನ್ನು ತುಂಬಾ ಹೊತ್ತು ಹಿಡಿದುಕೊಂಡಿರುತ್ತಾರೆ, ಅದರ ಜೊತೆಗೆ ಮಾತಾಡ್ತಾರೆ ನಗ್ತಾರೆ, ನನ್ನ ಜೊತೆಗೆ ಒಂದು ದಿನವೂ ಹಾಗಿಲ್ಲ ದೇವರೇ ನನ್ನನ್ನು ಮೊಬೈಲಾಗಿ ಮಾಡಿ ಬಿಡು ಅಥವಾ ಮೊಬೈಲ್ ಒಳಗಿರುವುದನ್ನ ನನ್ನೊಳಗೂ ಕೊಟ್ಟು ಬಿಡು, ಮಕ್ಕಳು ನನ್ನ ಜೊತೆಗೆ ಮಾತಾಡ್ಲಿ ಕಷ್ಟ ಸುಖ ಹಂಚಿಕೊಳ್ಳಿ ನಾನು ಈ ಮನೆಯಲ್ಲಿ ಒಬ್ಬಳು ಅನ್ನೋದು ಅವರಿಗೆ ಅರ್ಥವಾಗಲಿ, ಅಷ್ಟು ಸಾಕು…
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!