ಭಗವಂತ ನನಗೊಂದು ಪ್ರಶ್ನೆ, ನಾವು ಮನುಷ್ಯರು ಅಂತ ತಿಳಿದುಕೊಳ್ಳುವುದು ಹೇಗೆ? ಭಗವಂತ ನಕ್ಕು ನುಡಿದ, ನೀನು ಬದುಕುತ್ತಿರುವ ಕ್ಷಣದಲ್ಲಿ ನಿನಗೆ ನಿನ್ನ ಮನೆಯನ್ನ, ಸೋರುತ್ತಿರುವ ಹಂಚನ್ನ, ಬಿರುಕುಬಿಟ್ಟ ಗೋಡೆಯನ್ನ ತಂದೆ ತಾಯಿಗಳ ಮಾತನ್ನು ಕೇಳಿದಾಗ ಬದುಕಿನಲ್ಲಿ ನಾನು ಸಾಧಿಸಬೇಕಾದದ್ದೇನೋ ಇದೆ, ನನ್ನ ಬದುಕಿನ ದಾರಿ ಇನ್ನೊಂದಷ್ಟು ಹೊಸ ಮಾರ್ಗಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ ನನ್ನನ್ನು ನಂಬಿದವರ ದಾರಿಯನ್ನ ನಾನು ಇನ್ನೂ ಚೆಂದಗಾಣಿಸಿ ಕೊಡಬೇಕು ಅನ್ನುವ ಯೋಚನೆ ಮೂಡಿ ನೀನು ಇನ್ನೊಂದಷ್ಟು ಹೆಚ್ಚು ಶ್ರಮ ಹಾಕಿ ದುಡಿಮೆಯ ಕಡೆಗೆ ಹೆಜ್ಜೆ ಇಟ್ಟಾಗ ಅದು ಮನುಷ್ಯ ಅಂತ ಕರೆಸಿಕೊಳ್ಳುವ ಒಂದು ಮಾರ್ಗ ಹೀಗೆ ಮನುಷ್ಯನಾಗುವ ಹಲವು ಮಾರ್ಗಗಳಿವೆ ಅದರಲ್ಲಿ ಇದು ಒಂದು. ಮನಸ್ಸಿನ ಅತಿರೇಕಕ್ಕೆ ಹೋಗಿ ಕೆಟ್ಟ ಕೆಲಸಗಳನ್ನ ಮಾಡಿ ಕುಡಿತ ಜೂಜು ಮಾದಕ ವ್ಯಸನಿಯಾಗಿ ರಾಕ್ಷಸನಾಗಿ ಸಾವಿನ ಕಡೆಗೆ ಬದುಕಿಗರ್ತವಿಲ್ಲದೆ ಸಾಗುವ ಸ್ಥಿತಿ ಇದು ಮನುಷ್ಯ ಮಾರ್ಗವಲ್ಲ. ಹಾಗಾಗಿ ಈ ಒಂದು ದಾರಿಯನ್ನ ವಿವೇಚಿಸಿ ಹೆಜ್ಜೆ ಇಟ್ಟು ಬಿಡು ಇನ್ನು ಹಲವು ದಾರಿಗಳನ್ನ ಮುಂದಿನ ದಿನಗಳಲ್ಲಿ ತಿಳಿಸಿಕೊಡುತ್ತೇನೆ ನಾನು ಮತ್ತೆ ಕುಳಿತು ಯೋಚಿಸುವುದ್ದಕ್ಕೆ ಆರಂಭಿಸಿದೆ ನಾನು ಮನುಷ್ಯನಾಗಿದ್ದೇನಾ ನನ್ನ ಸುತ್ತಮುತ್ತಲಿನವರು ಮನುಷ್ಯರಾಗುತ್ತಾ ಇದ್ದಾರಾ? ಮನುಷ್ಯರಾಗಿದ್ದಾರಾ ಪ್ರಶ್ನೆಗಳನ್ನ ಹುಡುಕ್ತಾ ಹೋದ ಹಾಗೆ ಹೊಸ ಉತ್ತರಗಳು ದೊರೆಯುವುದಕ್ಕೆ ಆರಂಭವಾದವು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!