ಸಣ್ಣವರಿದ್ದಾಗ ಅಪ್ಪ ಅಮ್ಮ ಹೇಳುತ್ತಿದ್ದ ಮಾತು ಸುಳ್ಳು ಅಂತ ಅನ್ನಿಸೋಕೆ ಆರಂಭವಾಗಿದೆ, ಅವರು ಯಾವಾಗಲೂ ಹೇಳುತ್ತಿದ್ದದ್ದು ಒಂದೇ ಮಾತು ನಿಮ್ಮ ಬದುಕನ್ನು ನೀವೇ ಕಟ್ಟಿಕೊಳ್ಳಬೇಕು, ಈ ಮನೆಯವರು ನೀರು ಹಾಕುತ್ತಾರೆ ಅಂತ ನಂಬಿಕೆ ಇಟ್ಟುಕೊಳ್ಳಬಾರದು, ಮಳೆಗಾಲದಲ್ಲಿ ಸುರಿಯುವ ನೀರನ್ನು ಎಷ್ಟು ಬೇಕೋ ಅಷ್ಟು ಹೇಳಿ ಮುಂದಿನ ಸಲಕ್ಕೂ ಬೇಕಾದಷ್ಟು ಶೇಖರಿಸಿಕೊಂಡರೆ ನಮ್ಮ ಬದುಕು ಅದ್ಭುತವಾಗಿರುತ್ತೆ. ನಮ್ಮ ಹಿಂದಿನ ಇಷ್ಟು ವರ್ಷಗಳ ಕಾಲ ಇದೇ ನಡೆದು ಬಂದಿರೋದು ಅಂತ ಹೇಳಿದ್ರು. ಆದ್ರೆ ಇತ್ತೀಚಿಗೆ ಈ ಕಾಲದಲ್ಲಿ ಮಳೆ ಬರಬೇಕಿತ್ತು ಒಂದು ಹನಿ ನೀರು ಸಿಗದೆ ಉಸಿರುಗಟ್ಟುವ ವಾತಾವರಣ ಶುರುವಾಗಿದೆ, ಅಪ್ಪ ಅಮ್ಮ ಹೇಳಿದ್ದನ್ನು ಕೇಳಿಕೊಂಡು ನೀರು ಸಿಗುತ್ತೆ ಅಂತ ಕಾದು ಕಾದು ಬೇರು ಸತ್ತು ಎಲೆ ಸತ್ತು ಕೊನೆಯ ಉಸಿರಿಗೆ ತಲುಪಿಬಿಟ್ಟಿದ್ದೇವೆ. ಹೀಗಿದ್ದೂ ಮಳೆನ ನಂಬಿಕೊಂಡು ಬದುಕೋದು ಹೇಗೆ? ಅಪ್ಪ-ಅಮ್ಮನ ಮಾತು ಸತ್ಯವಾಗಬೇಕು ಅಂತಾದ್ರೆ ಮಳೆ ಸುರಿಬೇಕು ನಾವು ಬದುಕಬೇಕು. ಇಲ್ಲಿ ಸಂಬಂಧ ಇರೋದು ಬೇರಿಳಿಸಿದ ಗಿಡಗಳಿಗೆ ನೀರು ತುಂಬಿದ ಮೋಡಗಳಿಗೆ ಹಾಗಾಗಿ ನಂಬಿಕೆ ಉಳಿಸಬೇಕಾದರೆ ಮಳೆ ಹನಿ ಭೂಮಿಗೆ ಬರಲೇಬೇಕು. ಅದಕ್ಕೆ ಕಾಯ್ತಾ ಇದ್ದೇವೆ. ಬೇಡಿಕೆಯ ಧೈರ್ಯತೆಯ ದೈನ್ಯತೆಯ ನುಡಿ ಭಗವಂತನ ಬಳಿಗೆ ತಲುಪಿದಾಗ ಆತ ಕರಗಿ ಭೂಮಿಗಿಳಿದು ಬಿಟ್ಟ, ನೆಲ ತಂಪಾಯಿತು ಎಲೆ ಹಸಿರಾಯಿತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!