ಭಯದಲ್ಲಿ ಕನಸುಗಳು ಮೂಲೆ ಸೇರಬಹುದು, ಯಾರದೋ ಮನೆಯ ಗೋಡೆಯೊಳಗೆ ಬಾಗಿಲು ಒಳಗೆ ಬಂಧಿಯಾಗಿರಬಹುದು. ಯಾರದೋ ತಾಳಿಗೆ ತಲೆಯೊಡ್ಡಿರಬಹುದು, ಜವಾಬ್ದಾರಿಗೆ ಹೆಗಲಾಗಿರಬಹುದು ಅಲ್ಲಿಗೆ ಕನಸುಗಳು ಸಾಯಬಹುದು. ಹೀಗೆ ಬರೆದಿದ್ದ ಪತ್ರ ಬಂದು ಕೈಗೆ ದೊರಕಿತ್ತು. ಪತ್ರ ಬರೆದವರ ವಿಳಾಸ ಇರ್ಲಿಲ್ಲ .ಆದರೆ ಬರವಣಿಗೆಯಲ್ಲಿ ನೋವಿತ್ತು. ಹಲವು ಕನಸುಗಳನ್ನು ಕಂಡು ಆ ಕನಸುಗಳನ್ನು ಕನಸುಗಳನ್ನು ಹಂಚಿಕೊಳ್ಳುವುದಕ್ಕೆ ತಮ್ಮವರ್ಯಾರು ಜೊತೆ ಇಲ್ಲದ ನೋವಿತ್ತು. ತನ್ನ ಮನಸಲ್ಲಿದ್ದದನ್ನ ಹೇಳಿಕೊಳ್ಳುವುದಕ್ಕೆ ಭಯವಿದ್ದ ಕಾರಣ ಯಾವುದನ್ನು ಹಂಚಿಕೊಳ್ಳಲಾಗದೆ ಎಲ್ಲವೂ ಮೌನವಾಗಿ ಉಳಿದಿತ್ತು. ಮನೆಯವರ ಮಾತಿಗೆ ತಲೆ ತೂಗುವುದಷ್ಟೇ ಬದುಕಾಗಿ ಹೋದ ಕಾರಣ ಎಷ್ಟು ದಿನ ಕಂಡ ಕನಸುಗಳೆಲ್ಲವೂ ಬರಿಯ ಆಲೋಚನಯಲ್ಲಿಯೇ ಉಸಿರುಕಟ್ಟಿ ಸಾಯುತ್ತಿದೆ. ಪತ್ರ ಬರೆದವರ ಬದುಕು ಮಾತ್ರವಲ್ಲ ಪತ್ರವನ್ನು ಬರೆಯದೆ ಹೇಳಿಕೊಳ್ಳಲಾಗದೆ ಮೌನವಾಗಿ ಕುಳಿತ ಹಲವು ಮನಸ್ಸುಗಳು ಇನ್ನೂ ಸಮಯಕ್ಕೆ ಕಾಯುತ್ತಿವೆಯೋ ಪರಿಸ್ಥಿತಿಯನ್ನು ನೆನೆದು ಅಳುತ್ತಿದೆಯೋ ಗೊತ್ತಿಲ್ಲ. ಪತ್ರವನ್ನು ಓದಿದ ನೀವಾದರೂ ನಿಮ್ಮ ಮನೆಯ ಕನಸುಗಳನ್ನು ಬದುಕುವುದಕ್ಕೆ ಅವಕಾಶ ಕೊಡಿ.... ಹೀಗೆ ಪತ್ರ ಕೊನೆಯಾಗಿತ್ತು ಆಲೋಚನೆ ಮುಂದುವರೆದಿತ್ತು

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ