ಪ್ರವಾಸ ಹೋದವರು ವಾಪಸು ಮತ್ತದೇ ಊರಿಗೆ ಮರಳಿ ಬರಬೇಕಲ್ಲಾ? ನೀವು ಹೊಸತನವನ್ನು ಹುಡುಕಿಕೊಂಡು ಹೊಸ ಊರನ್ನು ಹುಡುಕಿಕೊಂಡು ನಮ್ಮೂರನ್ನು ಬಿಟ್ಟು ತೆರಳಿದ್ದೀರಿ. ನಿಮ್ಮ ಪ್ರವಾಸಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಪ್ರವಾಸಕ್ಕೂ ಸಮಯ ಬೇಕಲ್ಲವೇ. ನಿಮ್ಮ ಕೆಲಸದ ಸಮಯದಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಪ್ರವಾಸ ಹೊರಟಿರುವುದು ಎಷ್ಟು ಸರಿ ? ನಮ್ಮಲ್ಲಿ ಈ ಸಮಯಕ್ಕೆ ಮಳೆ ಬರಬೇಕಿತ್ತು, ನಿಮಗೆ ಮಳೆ ಸುರಿಸುವ ಜವಾಬ್ದಾರಿಯನ್ನು ನೀಡಿಯಾಗಿತ್ತು. ನೀವು ಒಂದಷ್ಟು ಹನಿಗಳನ್ನು ಸುರಿಸಿ ಈಗ ಪ್ರವಾಸ ಹೊರಟುಬಿಟ್ಟಿದ್ದೀರಿ. ಒಬ್ಬೊಬ್ಬರು ಒಂದೊಂದು ಊರಿಗೆ ಹೊರಟು ನಮ್ಮೂರು ಬಿಸಿಲಲ್ಲಿ ಬೇಯುವಂತೆ ಮಾಡಿದ್ದೀರಿ. ಮುಂದಿನ ಸಲ ನಿಮ್ಮ ಪ್ರವಾಸವನ್ನ ನಾವೇ ಆಯೋಜನೆ ಮಾಡುತ್ತೇವೆ. ಆದರೆ ಈ ಸಮಯದಲ್ಲಿ ಮಳೆಯನ್ನು ಸುರಿಸಿ ಒಂದಷ್ಟು ಪುಣ್ಯ ಕಟ್ಟಿಕೊಳ್ಳಿ. ನಿಮ್ಮ ಪ್ರವಾಸದ ಸಂಪೂರ್ಣ ಖರ್ಚು ವೆಚ್ಚವನ್ನ ನಾವೇ ಭರಿಸುತ್ತೇವೆ. ದಯವಿಟ್ಟು ಪ್ರವಾಸವನ್ನು ಅರ್ಧದಲ್ಲಿ ಮೊಟಕುಗೊಳಿಸಿ ವಾಪಾಸು ಬಂದು ಮಳೆಯನ್ನು ಸುರಿಸಿ  ಮಳೆಗಾಲ ಮುಗಿದ ಮೇಲೆ ಪ್ರವಾಸ ಹೊರಟು ಬಿಡಿ. ದಯವಿಟ್ಟು ವಾಪಸು ಬನ್ನಿ ಮೋಡಗಳೇ ಕಾಯುತ್ತಿದ್ದೇವೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ