ಅವಳು ಪೇಟೆಗೆ ಹೊರಟಿದ್ದಾಳೆ. ತನ್ನ ಮಗನ ಮುಂದಿನ ಶಿಕ್ಷಣದ ದೊಡ್ಡ ಕಾಲೇಜಿಗೆ ಸೇರಿಸಲು ಪೇಟೆಗೆ ಹೊರಟಿದ್ದಾಳೆ. ಅವಳಲ್ಲಿ ತುಂಬಾ ಚೆಂದದ ಸೀರೆ ಇಲ್ಲ, ಕಾಲಿಗೆ ಚಪ್ಪಲಿ ಇಲ್ಲ ದಿನಂಪ್ರತಿ ಮನೆ ಮನೆಯಲ್ಲಿ ದುಡಿದು ಬದುಕು ಕಟ್ಟಿಕೊಳ್ಳಬೇಕು ಆದರೆ ಮಗನ ಬದುಕು ದಿನೇ ದಿನೇ ವೃದ್ದಿ ಆಗಬೇಕು ಅನ್ನುವ ಆಸೆಯನ್ನು ಹೊತ್ತು ಆಕೆ ಪೇಟೆಗೆ ಹೊರಟಿದ್ದಾಳೆ. ಒಂದು ದಿನವೂ ದೊಡ್ಡ ಬಸ್ಸು ಹತ್ತಿದವಳಲ್ಲ ,ದೊಡ್ಡವರ ಮುಂದೆ ಗಟ್ಟಿಧನಿಯಲ್ಲಿ ಮಾತಾಡಿದವಳಲ್ಲ ಆದರೆ ಮಗನ ಕನಸಿಗೆ ಬದುಕಿನ ದಾರಿಗೆ ಆಕೆ ಪೇಟೆಗೆ ಬರುತ್ತಿದ್ದಾಳೆ. ಅಲ್ಲಿ ದೊಡ್ಡ ಕಾಲೇಜಿನಲ್ಲಿ ಮಗನ ಶಿಕ್ಷಣಕ್ಕೆ ಹಣದ ಹೊಂದಾಣಿಕೆಗೆ ಸಾದ್ಯವಿದೆ ಅನ್ನುವ ನಂಬಿಕೆಗೆ ಊಟ ಬಿಟ್ಟಿದ್ದಾಳೆ, ತಾನೊಬ್ಬನೇ ತನ್ನ ಮಗನನ್ನ ಓದಿ ಗೆಲ್ಲಿಸಬೇಕಾದ ಕಾರಣ ಹಾಗೆ ಧೈರ್ಯದಿಂದಲೇ ಪೇಟೆಗೆ ಹೊರಟಿದ್ದಾಳೆ. ಮಗನನ್ನ ದೊಡ್ಡ ಆಫೀಸಿನಲ್ಲಿ ದೊಡ್ಡ ಅಧಿಕಾರಿಯಾಗಿ ನೋಡಿ ಆತನಿಗೆ ಹಲವು ಜನರ ಮುಂದೆ ಗೌರವ ಸಿಗುವ ಆಸೆಯಿಂದ ಆಕೆ ಪೇಟೆಗೆ ಹೊರಟಿದ್ದಾಳೆ. ಆಕೆಯ ಕನಸುಗಳೆಲ್ಲವೂ ಮಗನ ಜೇಬಿನಲ್ಲಿದೆ, ಪುಸ್ತಕದಲ್ಲಿದೆ, ಕೋಣೆಯಲ್ಲಿದೆ. ಆತನು ಅದೇ ಕನಸಲ್ಲಿ ಬದುಕುತ್ತಿದ್ದಾನೆ
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!