ಒಂದಾನೊಂದು ಕಾಲದಲ್ಲಿ ಆ ಊರಲ್ಲಿ ಜನರು ನೆಮ್ಮದಿಯಿಂದ ಬದುಕುತ್ತಿದ್ದರು. ಯಜಮಾನನ ಮಾತು ಎಲ್ಲರಿಗೂ ನ್ಯಾಯದ ಮಾತಾಗಿತ್ತು. ಸಣ್ಣ-ಪುಟ್ಟ ಜಗಳಗಳಾದರೂ ಊರಿನ ಪಂಚಾಯಿತಿ ಕಟ್ಟೆಯಲ್ಲಿ ಹಿರಿಯರು ಕುಳಿತು ಮಾತನಾಡಿ ಪರಿಹಾರ ಮಾಡುತ್ತಿದ್ದರು. ಪೊಲೀಸ್ ಠಾಣೆಯ ಮೆಟ್ಟಿಲೇರುವ ಪರಿಸ್ಥಿತಿ ಬಹಳ ಅಪರೂಪವಾಗಿತ್ತು.

ಒಂದು ದಿನ ಊರಿನಲ್ಲಿ ಒಂದು ಸಣ್ಣ ಅವಘಡ ನಡೆಯಿತು. ಅದಕ್ಕೆ ನ್ಯಾಯ ಕೇಳುತ್ತಾ ಕೆಲವರು ಪ್ರತಿಭಟನೆ ಆರಂಭಿಸಿದರು. ಮೊದಲಿಗೆ ಅದು ಶಾಂತಿಯುತವಾಗಿತ್ತು. ಜನರು ಕೂಡ ಅವರ ಜೊತೆ ನಿಂತರು.ಆದರೆ, ಸ್ವಲ್ಪ ದಿನಗಳಲ್ಲಿ ಪ್ರತಿಭಟನೆಯೊಳಗೆ ಕೆಲವು ಮೋಸಗಾರರು ಮತ್ತು ಸ್ವಾರ್ಥಿಗಳು ಸೇರಿಕೊಂಡರು. ಅವರು ಜನರ ಭಾವನೆಗಳ ಜೊತೆ ಆಟವಾಡಿದರು. ಸುಳ್ಳು ಸುದ್ದಿಗಳನ್ನು ಹರಡಿದರು. "ನೀವು ಮೌನವಾಗಿದ್ದರೆ ನಿಮಗೆ ನ್ಯಾಯ ಸಿಗುವುದಿಲ್ಲ" ಎಂದು ಜನರನ್ನು ರೊಚ್ಚಿಗೆಬ್ಬಿಸಿದರು.ಕೋಪದಿಂದ ಜನರು ರಸ್ತೆಗಿಳಿದರು. ಕಲ್ಲು ತೂರಿದರು, ವಾಹನಗಳಿಗೆ ಬೆಂಕಿ ಹಚ್ಚಿದರು, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾಳು ಮಾಡಿದರು. ಪರಿಸ್ಥಿತಿ ಕೈಮೀರಿದಾಗ ಪೊಲೀಸರು ಬಂದರು. ಲಾಠಿ ಪ್ರಹಾರ ನಡೆಯಿತು. ಗಾಯಗೊಂಡವರು ಸಾಮಾನ್ಯ ಜನರೇ. ಆದರೆ ಜನರನ್ನು ಪ್ರಚೋದಿಸಿದ್ದವರು? 

"ಬೆಂಕಿ ಹಚ್ಚಿದವನು ಸುಟ್ಟುಕೊಳ್ಳಲಿಲ್ಲ... ಬೆಂಕಿ ನಂದಿಸಲು ಬಂದವನೂ ಸುಟ್ಟುಕೊಳ್ಳಲಿಲ್ಲ... ಆದರೆ ಬೆಂಕಿಯೊಳಗೆ ಹಾರಿದವನೇ ಸುಟ್ಟುಹೋಗಿದ್ದ ಕಾಲ‌ಮೀರಿ ಹೋಗಿತ್ತು

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ