ಆ ಕೋಣೆಗೆ ಎರಡು ಬಾಗಿಲು, ಎರಡು ಬಾಗಿಲಲ್ಲಿ ಒಬ್ಬೊಬ್ಬರು ಹೊರಟುಹೋದ್ರು. ಅವರು ಇಷ್ಟರವರೆಗೆ ಒಳಗೆ ಕುಳಿತು ಮಾಡಿದ್ದೇನೂ ಮಾತಾಡಿದ್ದೇನೂ, ಪ್ರತೀ ಸಲವೂ ಕೋಣೆಯಿಂದ ಹೊರಟು ಹೋದ ನಂತರ ಒಬ್ಬರು ಅಧಿಕಾರದ ಚುಕ್ಕಾಣಿ ಹಿಡಿತಾರೆ ಇನ್ನೊಬ್ಬರು ವಿರೋಧ ಪಕ್ಷವಾಗಿ ಬಿಡ್ತಾರೆ. ಇದು ಆಗಾಗ ಅದಲು ಬದಲಾಗಿರುತ್ತದೆ. ಕೆಲವೊಂದು ಸಮಸ್ಯೆಗೆ ಒಬ್ಬರು ಪ್ರತಿನಿಧಿಸಿದರೆ ಇನ್ನೊಬ್ಬರು ವಿರೋದಿಸ್ತಾರೆ, ಒಮ್ಮೊಮ್ಮೆ ಸಮ್ಮತಿ ಸೂಚಿಸುತ್ತಾರೆ, ಆದರೆ ಏನೇ ತಪ್ಪದರೂ ಇಷ್ಟರವರೆಗೂ ಯಾರಿಗೂ ಶಿಕ್ಷೆ ಆಗೇ ಇಲ್ಲ ಸ್ವಂತ ಸಂಪಾದನೆ ಹೆಚ್ಚಾಗಿದೆ. ಅವರ ಜೊತೆಯಲ್ಲಿ ನಿಂತವರು ಯಾರಿಗೂ ಅವರು ಒಂದೇ ಕೋಣೆಯಿಂದ ಹೊರಗೆ ಬಂದಿರುವುದು ತಿಳಿದೇ ಇಲ್ಲ. ಅವರ ಬೆನ್ನ ಹಿಂದೆ ನಿಂತವರು ಈಗಲೂ ಮನೆ ಅಂಗಳ ಊರು ಕೇರಿಗಳ ನಡುವೆ ಬೇಲಿಕಟ್ಟಿ ಬದುಕುತ್ತಿದ್ದಾರೆ. ಕೋಣೆಯೊಳಗೆ ಇಬ್ಬರಿಗೂ ಬದುಕು ಅದ್ಭುತವಾಗಿದೆ. ಹೊರಗಡೆ ಮಾತಿನಲ್ಲಿ ವಾದ ವಿವಾದ ಮಾಡುವವರು ಕೋಣೆ ಒಳಗಡೆ ಕೈ ಕುಲುಕಿ ಹೆಗಲ ಮೇಲೆ ಕೈ ಹಾಕಿ ಮಾತನಾಡುತ್ತಾರೆ. ಅವರು ವಿರೋದಿಗಳು ಅಂತ ಊರು ಇನ್ನೂ ನಂಬಿದೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!