ಆ ಮನೆಯ ಯಜಮಾನ ಒಂದಷ್ಟು ನಾಯಿಗಳನ್ನು ಸಾಕ್ತಾ ಇದ್ದ. ಎಲ್ಲಾ ನಾಯಿಗಳನ್ನ ಒಟ್ಟಿಗೆ ತಂದದ್ದಲ್ಲ, ತನ್ನ ಮನೆಯ ಆಸ್ತಿ ದೊಡ್ಡದಾಗುತ್ತ ಹೋದ ಹಾಗೆ ಒಂದೊಂದೇ ನಾಯಿಗಳನ್ನು ಸೇರಿಸ್ತಾ ಸೇರಿಸ್ತಾ ಈಗ ಅವನ ಬಳಿ ಒಂದಷ್ಟು ನಾಯಿಗಳಿದ್ದಾವೆ. ನಾಯಿಗಳಿಗೆ ಪ್ರತಿದಿನ ಊಟ ಹಾಕ್ತಾನೆ. ನಾಯಿಗಳು ತುಂಬಾ ಚೆನ್ನಾಗಿ ಕೆಲಸವನ್ನು ಮಾಡ್ತಾ ಇದ್ದಾವೆ. ನಾಯಿಗಳು ಈ ಮನೆಯನ್ನ ಬಿಟ್ಟು ಹೋಗುವ ಯೋಚನೆಯನ್ನೇ ಮಾಡಲಿಲ್ಲ ಕೆಲವೊಂದು ನಾಯಿಗಳು ಮನೆ ಕಾಯುವುದಕ್ಕಿಂತಲೂ ಊರನ್ನು ಕಾದರೆ ಅದರ ಸಾಮರ್ಥ್ಯಕ್ಕೆ ಹೆಚ್ಚು ಗೌರವ ಹೆಚ್ಚು ಆಹಾರ ಸಿಗಬಹುದಿತ್ತೇನೋ ಆದರೆ ಆ ನಾಯಿಗಳಿಗೆ ಮನೆ ಯಜಮಾನ ಪ್ರೀತಿಸುತ್ತಾನೆ ನಮ್ಮ ಬಳಿ ಪ್ರೀತಿಯಿಂದ ಮಾತಾಡ್ತಾನೆ, ಆಟವಾಡುವುದಕ್ಕೆ ಕರೆದುಕೊಂಡು ಹೋಗುತ್ತಾನೆ ಉಳಿದವರಿಗಿಂತ ನಮ್ಮನ್ನ ಹೆಚ್ಚು ನಂಬಿದ್ದಾನೆ ಅನ್ನುವ ಕಾರಣಕ್ಕೆ ಇನ್ನು ಆ ಮನೆಯಲ್ಲಿ ಕೆಲಸ ಮಾಡ್ತಾ ಇದ್ದಾವೆ. ಆ ನಾಯಿಗಳಿಗೆ ಕೊನೆಗೂ ತಮ್ಮಿಂದ ಮನೆ ಕಾಯೋದಕ್ಕಿಂತ ಇನ್ನೊಂದಷ್ಟು ಹೆಚ್ಚು ಸಾಮರ್ಥ್ಯದ ಕೆಲಸವನ್ನು ಮಾಡುವುದಕ್ಕೆ ಸಾಧ್ಯ ಇದೆ ಅನ್ನೋದು ಅರ್ಥವಾಗಲೇ ಇಲ್ಲ. ಈಗಲೂ ಮನೆ ಮುಂದೆ ನಿಂತು ಬೊಗಳುತ್ತಾನೆ ಇದ್ದಾವೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!