ಕಸಗಳೆಲ್ಲ ಊರ ಊರ ಹೊರಗೆ ನಿಂತು ಮಾತುಕತೆ ಶುರು ಮಾಡಿದವು. ಅವರು ಅಲ್ಲಿಗೆ ಬಂದು ವರ್ಷಗಳಾಗಿದೆ ಅಷ್ಟೇ. ಅದು ಅವರದ್ದೇ ಜಾಗವಂತೆ. ಇದಕ್ಕಿಂತ ಹಿಂದೆ ಈ ಕಸಗಳಿಗೆ ವಾಸ ಮಾಡುವುದಕ್ಕಿಂತ ಬೇರೆ ಜಾಗವನ್ನು ನಿಗದಿ ಮಾಡಿದ್ರು ಅಲ್ಲಿ ಜನ ಹೆಚ್ಚಾಗುತ್ತಾ ಹೋದ ಹಾಗೆ ಜಾಗ ಬದಲಿಸಿ ಈ ಜಾಗವನ್ನು ನೀಡಿದರು. ಸ್ವಲ್ಪ ಜನ‌ ಇದ್ದವರು ಈಗ ಬೆಟ್ಟಗಳಾಗಿದ್ದಾರೆ. ನಿಮ್ಮ ನಡುವೆ ಬದುಕಿದ್ದವರು ನಾವು ನಮ್ಮನ್ನ ಅಗತ್ಯಕ್ಕೆ ಬೇಕಾದ ಹಾಗೆ ಬಳಸಿಕೊಂಡು ನಾವು ಪ್ರಯೋಜನಕಿಲ್ಲ ಅಂತ ಆದಾಗ ಊರ ಹೊರಗೆ ತಂದು ಬಿಸಾಡಿದ್ದೀರಿ, ನಿಮ್ಮ ಸಂಸ್ಕೃತಿ ಆಚರಣೆ ವಿಚಾರ ಸಂಪ್ರದಾಯ ಸಾಧನೆ ಇವೆಲ್ಲವೂ ಮುಗಿದ ನಂತರ ನಾವಾಗಿ ಬಿಡುತ್ತೇವೆ ಅಲ್ವಾ? ಬೆಟ್ಟಗುಡ್ಡ ಉದ್ಯಾನವನ ಗದ್ದೆ ತೋಟ ಅಂತ ಅಂತ ಸುತ್ತಾಡುವವರಿಗೆ ಒಮ್ಮೆ ಈ ಕಸದ ರಾಶಿಯ ನಡುವೆ ಓಡಾಡಬೇಕು ಅಂತ ಅನಿಸಿಲ್ವಾ? ನೀವು ಶುಭ್ರ ಅಲ್ಲ ಅದ್ಭುತ ಸಾಧಕರಲ್ಲ ಒಂದು ಸಲ ನಮ್ಮ ಬಳಿ ಬಂದಾಗ ಎತ್ತರವಾಗಿ ಬೆಳೆದು ನಿಂತ ನಮ್ಮ ರಾಶಿಯನ್ನು ಕಂಡು ನಿಮಗೆ ಅನ್ನಿಸ್ತದೆ ನೀವೆಷ್ಟು ಸಣ್ಣವರು ಅಂತ ಹಾಗಾಗಿ ಆಮಂತ್ರಣ ಕೊಡುತ್ತಿದ್ದೇವೆ ಒಮ್ಮೆ ಬಂದು ಬಿಡಿ....

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ