ದೇವರಿಗೆ ತಾನು ಒಂದೇ ರೀತಿ ಸೃಷ್ಟಿಸಿದ ಕೆಲವು ಮನಸ್ಸುಗಳು ಹೇಗೆ ಒಂದೇ ಸನ್ನಿವೇಶವನ್ನು ನೋಡುತ್ತಾರೆ ಅನ್ನುವ ಸಂಶಯ ಮೂಡಿತು. ಅದಕ್ಕಾಗಿ ಆತ ವಾಯು ದೇವರನ್ನು ಹತ್ತಿರ ಕರೆದು ನೋಡು ಮಾರಾಯ ಒಂದು ಸಲ ಆ ಊರಿನ ಕಡೆ ಜೋರಾಗಿ ಗಾಳಿ ಬೀಸುವುದಕ್ಕೆ ಶುರು ಮಾಡು. ಪ್ರತಿಸಲನೂ ಅದೇ ವೇಗವಾದ ಗಾಳಿಯನ್ನು ಬೀಸ್ತಾ ಹೋಗು. ಜನ ಅದನ್ನ ಹೇಗೆ ನೋಡ್ತಾರೆ ಅಂತ ನನಗೆ ನೋಡಬೇಕು ಅಂತ ಅಂದುಬಿಟ್ಟ. ವಾಯುದೇವ ದೇವರ ಮಾತು ಕೇಳಿ ಪ್ರತಿದಿನ ಅದೇ ವೇಗದಲ್ಲಿ ಬೀಸುವುದ್ದಕ್ಕೆ ಶುರು ಮಾಡಿದ. ಆ ಗಾಳಿಗೆ ಛಾವಣಿ ಕಳೆದುಕೊಂಡ ಒಬ್ಬ ದಿನಪೂರ್ತಿ ದೇವರಿಗೆ ಬಯ್ಯುವುದಕ್ಕೆ ಶುರು ಮಾಡಿದ. ಒಬ್ಬ ಆ ಗಾಳಿಯಿಂದ ತೊಂದರೆ ಅನುಭವಿಸಬಾರದು ಅಂತ ದೊಡ್ಡದಾದ ಗೋಡೆ ಕಟ್ಟಿ ಸುರಕ್ಷಿತನಾಗಿ ಉಳಿದುಬಿಟ್ಟ. ಇವರಿಬ್ಬರ ನಡುವೆ ಇದ್ದ ಇನ್ನೊಬ್ಬ ದೊಡ್ಡದಾದ ಗಾಳಿಯ ಚಕ್ರಗಳನ್ನು ನಿರ್ಮಿಸಿ ಅದರಿಂದ ವಿದ್ಯುತ್ ಅನ್ನು ಉತ್ಪಾದಿಸಿ ತಾನು ಹಣ ಸಂಪಾದಿಸಿದ ಒಂದಷ್ಟು ಜನರಿಗೆ ವಿದ್ಯುತ್ ಹಂಚಿದ ಭಗವಂತನಿಗೆ ಮೇಲೆ ನಿಂತು ಎಲ್ಲವನ್ನು ನೋಡಿ ನಾನು ಕೊಟ್ಟ ಮೆದುಳೊಂದೇ ಆದರೆ ಆ ಕ್ಷಣದ ಸನ್ನಿವೇಶಗಳಿಗೆ ಅನುಗುಣವಾಗಿ ಒಬ್ಬೊಬ್ಬರು ಅವರಿಗೆ ಬೇಕಾದ ಹಾಗೆ ಬಳಸ್ತಾ ಇರೋದನ್ನು ನೋಡಿ ತನ್ನ ಸೃಷ್ಟಿ ಸಾರ್ಥಕವಾಯಿತು ಅಂತ ಅನಿಸೋದಕ್ಕೆ ಆರಂಭವಾಯಿತಂತೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!