ದೊಡ್ಡ ಹೋಟೆಲ್ ನಲ್ಲಿ ಕುಳಿತು ತಿನ್ನಬೇಕಾದ ವಸ್ತುವಿನ ದರವನ್ನ ನೋಡದೆ ಬದುಕಿರುವುದು ಅನುಭವಿಸುವುದಕ್ಕೆ ನಾವು ದುಡಿಯುತ್ತಾ ಇರುವ ಹಣದಲ್ಲಿ ನಾವು ತಿನ್ನುತ್ತಿರುವುದು ಅದಕ್ಕೆ ಯೋಚನೆ ಮಾಡೋದು ಏಕೆ? ಮನಸ್ಸಿಗೆ ಇಷ್ಟವಾದದ್ದನ್ನು ತರಿಸಿಕೊಂಡು ತಿಂದು ಮಾತುಕತೆ ಶುರು ಮಾಡಿದರು. ಈ ಚಂದದ ಹೋಟೆಲಿಗೆ ಯಾವಾಗ್ಲಾದ್ರೂ ಒಮ್ಮೆ ಅಪ್ಪ ಅಮ್ಮನ ಕರ್ಕೊಂಡು ಬರಬೇಕು. ಅವರ ಜೊತೆ ಇಲ್ಲಿ ಕುಳಿತು ಊಟ ತಿಂಡಿ ತಿನ್ನಬೇಕು ಅವರಿಗೆಷ್ಟು ಖುಷಿ ಅಗ್ಟಹುದು... ಅದೇ ಕ್ಷಣದಲ್ಲಿ ಊರಲ್ಲಿ ಆ ದಿನಕ್ಕೆ ಅಕ್ಕಿ ಇತ್ತು, ಜೊತೆಗೆ ನೆಂಚಿಕೊಳ್ಳುವುದಕ್ಕೆ ಸಾಂಬಾರು ಮಾಡುವುದಕ್ಕೂ ತರಕಾರಿ ಸಿಗದ ಕಾರಣ ಉಪ್ಪಿನಲ್ಲೇ ಊಟ ಗಂಟಲಲ್ಲಿ ಇಳಿಯುತ್ತಿತ್ತು ಎರಡು ಹಿರಿಜೀವಗಳಲ್ಲಿ. ಇದೇ ಕೆಲಸ ಊರಲ್ಲಿದ್ರು ಇಷ್ಟೇ ಸಂಬಳ ಸಿಗ್ತಾಯಿದ್ರು ದೊಡ್ಡ ಪೇಟೆಯ ಬದುಕೇ ಬೇಕು ಅಂತ ಮಕ್ಕಳು ಪೇಟೆಯಲ್ಲಿದ್ದರೆ ಹಳ್ಳಿಯಲ್ಲಿ ಮನೆಯ ನಾಲ್ಕು ಗೋಡೆಯ ನಡುವೆ ಬಂದಿಯಾಗಿ ಬಿಟ್ಟರು ಹಿರಿಯ ಜೀವಗಳು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!